SSLC ವಿದ್ಯಾರ್ಥಿಗಳೇ ಎಚ್ಚರ!

0
297

ಬೆಂಗಳೂರು ಪ್ರತಿನಿಧಿ ವರದಿ
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೇ ಹಾಗೂ ವಿದ್ಯಾರ್ಥಿಗಳ ಪೋಷಕರೇ ಎಚ್ಚರ…ನೀವು ಇದನ್ನು ಗಮನವಿಟ್ಟು ತಿಳಿದುಕೊಳ್ಳಿ…ಒಂದೇ ಒಂದು ನಿಮಿಷ ಲೇಟ್ ಆದರೂ, ಎಕ್ಸಾಂ ಮಿಸ್ ಆಗೋದು ಗ್ಯಾರೆಂಟಿ…ಪರೀಕ್ಷೆ ಪ್ರಾರಂಭವಾಗುವ ಮೊದಲೇ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಇರಬೇಕು.
 
 
 
ಇಡೀ ವರ್ಷದ ಶ್ರಮವನ್ನು ಲೇಟ್ ಮಾಡಿ ಮಿಸ್ ಮಾಡಿಕೊಳ್ಳಬೇಡಿ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು 9.15ರಿಂದ 9.30ರೊಳಗೆ ಎಕ್ಸ್ಂ ಹಾಲ್ ನಲ್ಲಿ ಇರಬೇಕು. ಎಸ್ ಎಸ್ ಎಲ್ ಸಿ ಪರೀಕ್ಷೆ ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಲಿದೆ. ಒಂದು ನಿಮಿಷ ಲೇಟ್ ಆದರೂ, ಪರೀಕ್ಷೆ ಕೊಠಡಿ ಪ್ರವೇಶಿಸಲು ಎಂಟ್ರಿ ಇರುವುದಿಲ್ಲ.
 
 
 
ಬೆಳಗ್ಗೆ 9.15-ಮೊದಲ ಲಾಂಗ್ ಬೆಲ್-ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿಗಳು ಹಾಜರಾಗಬೇಕು. ಬೆಳಗ್ಗೆ 9.25-2ನೇ ಲಾಂಗ್ ಬೆಲ್ ಕೊಠಡಿ ಮೇಲ್ವೀಚಾರಕರಿಗೆ ಪ್ರಶ್ನೆಪತ್ರಿಕೆ ಸೇರುತ್ತದೆ. 9.30-ಮೂರನೇ ಲಾಂಗ್ ಬೆಲ್ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ವಿತರಣೆಯಾಗುತ್ತದೆ.
ವಿದ್ಯಾರ್ಥಿಗಳು 9.31ಕ್ಕೆ ಬಂದರೆ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಇದರಿಂದ ಒಂದು ನಿಮಿಷ ಲೇಟ್ ಆದರೂ, ಎಕ್ಸಾಂ ಮಿಸ್ ಆಗಬಹುದು.

LEAVE A REPLY

Please enter your comment!
Please enter your name here