FIR ದಾಖಲೆ

0
378

ಬೆಂಗಳೂರು ಪ್ರತಿನಿಧಿ ವರದಿ
ಶೂಟಿಂಗ್ ವೇಳೆ ನಟರಿಬ್ಬರ ಭೀಕರ ದುರ್ಮರಣ ಹಿನ್ನೆಲೆಯಲ್ಲಿ ‘ಮಾಸ್ತಿಗುಡಿ’ ಚಿತ್ರತಂಡದ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಬೆಂಗಳೂರಿನ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಪೊಲೀಸರು ಚಿತ್ರತಂಡದ ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಮಾಸ್ತಿಗುಡಿ ಸಿನಿಮಾದ ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮಾ, ನಿರ್ಮಾಪಕ ಸುಂದರ್ ಮತ್ತು ಫಿಲ್ಮ ಯೂನಿಟ್ ಮ್ಯಾನೇಜರ್ ಭರತ್ ವಿರುದ್ಧ ಕೇಸ್ ದಾಖಲಾಗಿದೆ.
 
ತಿಪ್ಪಗೊಂಡನಹಳ್ಳಿ ಜಲಾಶಯದ ಅಧೀಕ್ಷಕಿ ಅನುಸೂಯ ದೂರಿನನ್ವಯ ಕೇಸ್ ದಾಖಲಾಗಿದೆ. ಸೆಕ್ಷನ್ 304, 188, ಸಹ ಕಲಂ 34ರಡಿ ಕೇಸ್ ದಾಖಲಾಗಿದೆ. ಐಪಿಸಿ ಸೆಕ್ಷನ್ 304 ಕೊಲೆಯಲ್ಲದ ಮಾನವ ಹತ್ಯೆ-ಜೀವಕ್ಕೆ ಅಪಾಯವಿರುವುದು ಗೊತ್ತಿದ್ದರೂ ಧುಮುಕುವಂತೆ ಪ್ರಚೋದನೆ ನೀಡಿ ಹತ್ಯೆಗೈದಿರುವುದು ಎಂದು ತಾವರೆಕೆರೆ ಪೊಲೀಸರು ಎಫ್ ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.
 
 
ಇನ್ನು ಮೃತ ನಟರಿಬ್ಬರನ್ನು ದುನಿಯಾ ವಿಜಿ ತಳ್ಳಿದ್ದು ಸಾಬೀತಾದರೆ ಕೇಸ್ ದಾಖಲಾಗುತ್ತದೆ. ವಿಡಿಯೋ ನೋಡಿ ನಂತರ ಕೇಸ್ ದಾಖಲಾಗುವ ಸಾಧ್ಯತೆ ಇದೆ ಎಂದು ತಾವರೆಕೆರೆ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here