ವಾರ್ತೆ

CITU ಸಮ್ಮೇಳನ

 
ವರದಿ: ಸುನೀಲ್ ಕುಮಾರ್
ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಸಿಐಟಿಯು ಅಖಿಲ ಭಾರತ ಸಮ್ಮೇಳನದ ಪೂರ್ವಭಾವಿಯಾಗಿ 2016 ಜೂನ್ 5, 6, 7ರಂದು ಮಂಗಳೂರಿನ ತೊಕ್ಕೊಟ್ಟಿನ ಕ್ಲಿಕ್ ಹಾಲಿನಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಅಖಿಗ)ನ ದ.ಕ. ಜಿಲ್ಲಾ ಸಮ್ಮೇಳನ ನಡೆಯಲಿದೆ ಎಂದು ಅಖಿಗ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 
 
ಒಂದು ಲಕ್ಷ ಸದಸ್ಯತ್ವ ಇರುವ ಅಖಿಗ ಜಿಲ್ಲಾ ಸಮಿತಿಯ ಬೀಡಿ, ಕಟ್ಟಡ, ಸಾರಿಗೆ, ಆಟೋರಿಕ್ಷಾ, ಇಂಜಿನಿಯರಿಂಗ್, ಕ್ಯಾಶ್ಯೂ, ಅಂಗನವಾಡಿ, ಅಕ್ಷರದಾಸೋಹ, ಆಶಾ, ಗುತ್ತಿಗೆ ಕಾರ್ಮಿಕರು, ಹಮಾಲಿ ಇತ್ಯಾದಿ ಬೇರೆ ಬೇರೆ ರಂಗದ ಕಾರ್ಮಿಕರಲ್ಲಿ ಆಯ್ಕೆಯಾದ 250 ಮಂದಿ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೀತಿಗಳಿಂದಾಗಿ ಕಾರ್ಮಿಕ ವರ್ಗಕ್ಕೆ ಹಾಗೂ ಜನಸಾಮಾನ್ಯರಿಗೆ ಭಾದಿಸುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ನಿರ್ಣಯಕೈಗೊಳ್ಳಲಾಗುವುದು. ಹಾಗೆನೇ ಜಿಲ್ಲೆಯ ಅಭಿವೃದ್ಧಿ ಪ್ರಶ್ನೆಗಳಾದ, ನಿರುದ್ಯೋಗ, ಬಡತನ, ಕುಡಿಯುವ ನೀರು, ಆರೋಗ್ಯ, ರಸ್ತೆ ಮತ್ತು ಜಿಲ್ಲೆಯ ಕಾರ್ಮಿಕ ಸಮುದಾಯದ ಪ್ರಮುಖ ಬೇಡಿಕೆಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಸಂಘಟನೆಯ ಸಕರಾತ್ಮಕ ಹಾಗೂ ನಕರಾತ್ಮಕ ಬೆಳವಣಿಗೆಗಳ ಬಗ್ಗೆ ಸಮ್ಮೇಳನ ಗಂಭೀರವಾಗಿ ವಿಮರ್ಶೆ ನಡೆಸಿ, ಹೊಸ ಪದಾಧಿಕಾರಿ, ಸಮಿತಿಯನ್ನು ಆಯ್ಕೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
 
 
 
ಸಮ್ಮೇಳನ ನಡೆಯುವ ವೇದಿಕೆಗೆ ಕಾಂ. ರಾಮಚಂದ್ರ ಉಚ್ಚಿಲ ವೇದಿಕೆ, ಸಮ್ಮೇಳನ ನಡೆಯುವ ಸ್ಥಳಕ್ಕೆ ಅಬ್ರಹಂ ಕರ್ಕಡ ನಗರ ಎಂದು ಹೆಸರಿಸಲಾಗಿದೆ. ಅಖಿಗನ ರಾಜ್ಯ ಸಮಿತಿ ಅಧ್ಯಕ್ಷರಾದ ವಿ.ಜೆ.ಕೆ. ನಾಯರ್ರವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. 2016 ಜೂನ್ 7ರಂದು 3 ಗಂಟೆಗೆ ತೊಕ್ಕೊಟ್ಟು ಪೇಟೆಯಲ್ಲಿ ಬೃಹತ್ ಕಾಮಿಕರ ಮೆರವಣಿಗೆ ಮತ್ತು ಬಹಿರಂಗ ಸಭೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
 
 
 
ನಗರಾಧ್ಯಕ್ಷರಾಗಿ ಜಯಂತಿ ಪುನರಾಯ್ಕೆ
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ 2ನೇ ಮಂಗಳೂರು ನಗರ ಸಮ್ಮೇಳನವು ಇತ್ತೀಚೆಗೆ ಬೋಳಾರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಮಂಗಳೂರು ನಗರದಲ್ಲಿ ಕಾರ್ಮಿಕ ಚಳುವಳಿಯನ್ನು ಬಲಿಷ್ಠವಾಗಿ ಕಟ್ಟಲು ಸಮ್ಮೇಳನವು ಪಣತೊಟ್ಟಿತು. ಮುಂದಿನ 3 ವರ್ಷಗಳ ಅವಧಿಗೆ ನೂತನ ಮಂಗಳೂರು ನಗರ ಸಮಿತಿಯನ್ನು ಸಮ್ಮೇಳನವು ಆಯ್ಕೆಗೊಳಿಸಿತು.
 
ಅಧ್ಯಕ್ಷರಾಗಿ ಜಯಂತಿ ಬಿ. ಶೆಟ್ಟಿಯವರು ಸರ್ವಾನುಮತದಿಂದ ಪುನರಾಯ್ಕೆಗೊಂಡರೆ, ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ ಜಪ್ಪಿನಮೊಗರು, ಖಜಾಂಚಿಯಾಗಿ ಸಂತೋಷ್ ಶಕ್ತಿನಗರರವರು ಆಯ್ಕೆಗೊಂಡರು. ಉಪಾಧ್ಯಕ್ಷರುಗಳಾಗಿ ಬಾಬು ದೇವಾಡಿಗ, ಭಾರತಿ ಬೋಳಾರ, ಅಹಮ್ಮದ್ ಬಾವ, ಕಾರ್ಯದರ್ಶಿಗಳಾಗಿ ರವಿಚಂದ್ರ ಕೊಂಚಾಡಿ, ಸಂತೋಷ್ ಆರ್.ಎಸ್., ಮಹಮ್ಮದ್ ಇರ್ಫಾನ್ ಆರಿಸಲಾಯಿತು.
 
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಯಲಕ್ಷ್ಮೀ ಜಪ್ಪಿನಮೊಗರು, ಪುಷ್ಪಲತಾ, ಯಶೋಧಾ, ಪ್ರೇಮನಾಥ ಜಲ್ಲಿಗುಡ್ಡೆ, ಅಶೋಕ್ ಶ್ರೀಯಾನ್, ನಾಗೇಶ್ ಕೋಟ್ಯಾನ್, ಮುಹಮ್ಮದ್ ಮುಸ್ತಫಾ, ಲಿಂಗಪ್ಪ ನಂತೂರು, ಅನ್ವರ್ ಶೇಕ್, ವಿಲ್ಲಿ ವಿಲ್ಸನ್ ಆಯ್ಕೆಯಾಗಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here