AIADMK ಪ್ರಧಾನ ಕಾರ್ಯದರ್ಶಿಯಾಗಿ 'ಚಿನ್ನಮ್ಮ'

0
428

ಚೆನ್ನೈ ಪ್ರತಿನಿಧಿ ವರದಿ
ತಮಿಳುನಾಡಿನ ಮಾಜಿ ಸಿಎಂ ಹಾಗೂ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ಉತ್ತರಾಧಿಕಾರಿಯಾಗಿ ಶಿಶಿಕಲಾ ನಟರಾಜನ್ ಆಯ್ಕೆಯಾಗಿದ್ದಾರೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಆಪ್ತೆ ಶಶಿಕಲಾ ಆಯ್ಕೆಯಾಗಿದ್ದಾರೆ.
 
 
 
ಇಂದು ನಡೆದ ಎಐಎಡಿಎಂಕೆ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಜೆ.ಜಯಲಲಿಯಾ ಆಪ್ತೆ ಶಶಿಕಲಾ ಅವರು ಎಐಎಡಿಎಂಕೆಯ ಚುಕ್ಕಾಣಿ ಹಿಡಿದಿದ್ದಾರೆ. ಪಕ್ಷದ ಸದಸ್ಯರು ಶಶಿಕಲಾ ನಟರಾಜನ್ ನನ್ನು ಅವಿರೋಧವಾಗಿ ಆರಿಸಿದ್ದಾರೆ. ಶಶಿಕಲಾ ಅನುಪಸ್ಥಿತಿಯಲ್ಲಿ ಎಐಎಡಿಎಂಕೆ ಪಕ್ಷ ನಿರ್ಣಯ ಕೈಗೊಂಡಿದೆ. ಸಿಎಂ ಪನ್ನೀರ್ ನಿರ್ಣಯದ ಪ್ರತಿಯನ್ನು ಶಶಿಕಲಾಗೆ ಹಸ್ತಾಂತರಿಸಲಿದ್ದಾರೆ.
 
 
ತಮಿಳುನಾಡಿನ ಸಿಎಂ ಒ.ಪನ್ನೀರ್ ಸೆಲ್ವಂ ಅವರು ಶಶಿಕಲಾರನ್ನು ‘ಚಿನ್ನಮ್ಮ’ ಎಂದು ಕರೆದಿದ್ದಾರೆ. ‘ಚಿನ್ನಮ್ಮ’ರನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದೇವೆ ಎಂದು ತಮಿಳು ಸಿಎಂ ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here