900ರ ಸಂಭ್ರಮದಲ್ಲಿ ಚನ್ನಕೇಶವ…

0
231

ಹಾಸನ ಪ್ರತಿನಿಧಿ ವರದಿ
ಶಿಲ್ಪಕಲೆ ಸೌಂದರ್ಯದಲ್ಲಿ ವಿಡೀ ವಿಶ್ವಕ್ಕೆ ಹೆಸರುವಾಸಿಯಾದ ಹಾಸನ ಜಿಲ್ಲೆಯ ಬೇಲೂರಿನ ಚನ್ನಕೇಶವ ದೇಗುಲಕ್ಕೆ ಇಂದು 900 ವರ್ಷದ ಸಂಭ್ರಮ.
ಕ್ರಿ.ಶ. 1117 ರಲ್ಲಿ ಚನ್ನಕೇಶವ ದೇಗುಲ ಸ್ಥಾಪನೆಯಾಗಿದೆ. ದೇಗುಲದ ಶಿಲ್ಪಕಲೆಗಳು 90 ದಶಕವಾದ್ರೂ ಇನ್ನೂ ಹಾಗೇ ಉಳಿದು ಜಗತ್ಪ್ರಸಿದ್ದವಾಗಿದೆ.
 
 
 
ಶಿಲಾಬಾಲಿಕೆಯರ ಬೇಲೂರು ಎಂದು ಪ್ರಸಿದ್ಧವಾಗಿರುವ ಬೇಲೂರಿನ ಚನ್ನಕೇಶವ ದೇಗುಲ ಇಂದು ಅಂದರೆ ಮಾ.10  900 ವರ್ಷಗಳನ್ನು ಪೂರೈಸುತ್ತಿದೆ.
 
 
 
ಈ ದೇವಸ್ಥಾನವು ಹೋಯ್ಸಳ ರಾಜ್ಯದ ವಿಷ್ಣುವರ್ಧನ ಮಹಾರಾಜರು ಕಟ್ಟಿಸಲ್ಪಟ್ಟಿದ್ದಾರೆ. ಕ್ರಿಸ್ತಶಕ 1117 ನೇ ಶ್ರೀ ಹೇವಿಳಾಂಬಿ ನಾಮ ಸಂವತ್ಸರದ ಚೈತ್ರ ಶುದ್ಧ ಬಿದಿಗೆ ಪ್ರತಿಷ್ಠಾಪಿಸಲಾಯಿತು. ಬೇಲೂರಿನಲ್ಲಿರುವ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನವನ್ನು ಹೊಯ್ಸಳರಾಜನಾದ ವಿಷ್ಣುವರ್ಧನರಾಜನು ಕಟ್ಟಿಸದನೆಂದು ಅದರಲ್ಲಿ ವಿಜಯನಾರಾಯಣ ದೇವರನ್ನು ಕ್ರ.ಶ. 1117 ರಲ್ಲಿ ಪ್ರತಿಷ್ಠಿಸಿದನೆಂದು ಅಲ್ಲಿರುವ ಒಂದು ಶಾಸನದಿಂದ ತಿಳಿದು ಬರುತ್ತದೆ. ಈಚೆಗೆ ಈ ದೇವರಿಗೆ ಚನ್ನಕೇಶವ ದೇವರೆಂದು ಹೆಸರುಬಂತು.

LEAVE A REPLY

Please enter your comment!
Please enter your name here