8644 ಕ್ಯೂಸೆಕ್ ನೀರು ಹೊರಕ್ಕೆ..

0
173

ನಮ್ಮ ಪ್ರತಿನಿಧಿ ವರದಿ
ಸೋಮವಾರ ರಾತ್ರಿಯಿಂದ ಎಸ್ ಡ್ಯಾಂನಿಂದ ನೀರನ್ನು ಹೊರಕ್ಕೆ ಬಿಡಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRSನಿಂದ 8644 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ.
ಕೆಆರ್ ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ 89.31 ಅಡಿಗಳಿವೆ. ವಿಶ್ವೇಶ್ವರಯ್ಯ ನಾಲೆ, ವರುಣಾ ನಾಲೆ, ಬಲದಂಡೆ ನಾಲೆಗೆ ನೀರು ಬೀಡಲಾಗಿದೆ. ಈ ನಾಲೆಗಳಿಗೆ ಸರ್ಕಾರ 3500 ಕ್ಯೂಸೆಕ್ ನೀರು ಹರಿಸುತ್ತಿದೆ. ಕಾವೇರಿಯ ಚಿಕ್ಕದೇವರಾಯ ಅರಸು ನಾಲೆ, ವಿರಿಜಾ ನಾಲೆ, ಬಂಗಾರದೊಡ್ಡಿ ನಾಲೆಗಳಿಗೆ 5100 ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ಈ ನಾಲೆ ಮೂಲಕವಾಗಿ ಕಾವೇರಿ ಕೊಳ್ಳದ ರೈತರಿಗೆ ರಾತ್ರಿಯಿಂದಲೇ ನೀರು ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
 
 
ಅಹೋರಾತ್ರಿ ಧರಣಿ
ಕೆಆರ್ ಎಸ್ ಜಲಾಶಯದಿಂದ ನೀರು ಬಿಡಲು ಆದೇಶ ಹಿನ್ನೆಲೆಯಲ್ಲಿ ಜಲಾಶಯದ ಮುಖ್ಯದ್ವಾರದ ಎದುರು ರೈತ ಸಂಘಟನೆಗಳ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಶ್ರೀರಂಗಪಟ್ಟಣ ರೈತ ಮುಖಂಡ ನಂಜುಂಡೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ರೈತರ ಹೆಸರಲ್ಲಿ ತಮಿಳುನಾಡಿಗೆ ನೀರು ಬಿಡುತ್ತಿರುವುದಕ್ಕೆ ಗರಂ ಆಗಿದ್ದಾರೆ. ಡ್ಯಾಂ ಸುತ್ತ ನಿಷೇಧಾಜ್ಞೆಯಿದ್ದರೂ ಪ್ರತಿಭಟನಾಕಾರರು  ಜಗ್ಗಲಿಲ್ಲ.

LEAVE A REPLY

Please enter your comment!
Please enter your name here