68ನೇ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ

0
225

ನವದೆಹಲಿ ಪ್ರತಿನಿಧಿ ವರದಿ
68ನೇ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಗಣರಾಜ್ಯೋತ್ಸವಕ್ಕೆ ನವದೆಹಲಿ ಸಕಲ ರೀತಿಯಲ್ಲೂ ಸಜ್ಜಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು, ಸ್ತಬ್ಧ ಚಿತ್ರಗಳ ಪ್ರದರ್ಶನ , ಯುದ್ಧ ವಿಮಾನಗಳ ಹಾರಾಟ ಪ್ರದರ್ಶನ ಜರುಗಲಿದೆ.
 
 
 
ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವಕ್ಕೆ ಭರ್ಜರಿ ಸಿದ್ದತೆ ನಡೆದಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನಡೆಸಿ ಭಾಷಣ ಮಾಡಲಿದ್ದಾರೆ. ಇನ್ನೂ ಈ ಬಾರಿ ಗಣರಾಜ್ಯೋತ್ಸವ ಪರೇಡ್’ನಲ್ಲಿ ಯುಎಇ ನ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಜಯೀದ್ ಅಲ್ ನಹ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
 
 
ಇನ್ನೂ ಧ್ವಜಾರೋಹಣದ ಬಳಿಕ ವಿವಿಧ ಪರೇಡ್, ಸಾಹಸ ಪ್ರದರ್ಶನ ನಡೆಯಲಿವೆ. ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು ಸುಮಾರು ಒಂದೂವರೆ ಗಂಟೆಗಳ ಕಾರ್ಯಕ್ರಮ ಆಕರ್ಷಕ ಏರೋ ಶೋ ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ .
 
 
ಕಾರ್ಯಕ್ರಮದ ವಿಶೇಷತೆಗಳು:
ದೆಹಲಿಯ ರಾಜಪಥ್‌ನಲ್ಲಿ ಗಣರಾಜ್ಯೋತ್ಸವ ಪಥಸಂಚಲನಾ
ಮಿಲಿಟರಿ ಪೊಲೀಸ್’​ನ ಶ್ವೇತಾ ಅಶ್ವ ತಂಡದಿಂದ ಮೋಟಾರ್ ಸೈಕಲ್ ಸಾಹಸ ಪ್ರದರ್ಶನ
ಸೈನ್ಯದ ಹೆಲಿಕಾಪ್ಟರ್‌ನಲ್ಲಿ ಹಾರಾಡುತ್ತಿರುವ ಅರಳಿದ ತ್ರಿವರ್ಣ ಧ್ವಜ.
ಪಥಸಂಚಲನದಲ್ಲಿ ಸಾಗಿ ಬರುತ್ತಿರುವ ಆಕಾಶ್‌ ಕ್ಷಿಪಣಿ ವ್ಯವಸ್ಥೆಗಳು
ಬ್ರಹ್ಮೋಸ್‌ ಕ್ಷಿಪಣಿಗಳು
ಐಎಎಫ್ ಯುದ್ಧ ವಿಮಾನಗಳು ಹಾರಾಟ ನಿರತವಾಗಿರುವುದು.
ಟ್ಯಾಂಕರ್‌ ಚಲಾಯಿಸುತ್ತಿರುವ ಭಾರತೀಯ ಯೋಧ. ಸಾಗಿ ಬರುತ್ತಿರುವ ಸೈನ್ಯದ ಟ್ಯಾಂಕರ್‌ಗಳು
ಪೆರೇಡ್‌ನ‌ಲ್ಲಿ ರೆಜಿಮೆಂಟ್‌ ಒಂದರ ಯೋಧರು
ಭಾರತೀಯ ಅರೆ ಸೈನಿಕ ಪಡೆಯ ಯೋಧರು
ರುದ್ರ ಹೆಲಿಕ್ಯಾಪ್ಟರ್ ನಿಂದ ಫ್ಲೈ ಪಾಸ್ಟ್
ಯುಎಇ ಮಾರ್ಚಿಂಗ್ ತಂಡದಿಂದ ಬ್ಯಾಂಡ್ ಪರೇಡ್
ಭೂ ಸೇನೆ, ವಾಯು ಸೇನೆ , ನೌಕಾ ಸೇನೆ ಪ್ಯಾರಾ ಮಿಲಿಟರಿಯಿಂದ ಆಕರ್ಷಕ ಪರೇಡ್
ಒಟ್ಟು 23 ಸ್ತಬ್ಧ ಚಿತ್ರಗಳು ಪರೇಡ್ ನಲ್ಲಿ ಭಾಗಿ
ಆರು ಆರ್ಮಿ ಬ್ಯಾಂಡ್ ಗಳಿಂದ ಸಂಗೀತ ಪ್ರದರ್ಶನ
ಶಾಲಾ ಮಕ್ಕಳಿಂದ ನಾಲ್ಕು ನೃತ್ಯ ಪ್ರದರ್ಶನಗಳು ನಡೆಯಲಿವೆ.

LEAVE A REPLY

Please enter your comment!
Please enter your name here