ಪ್ರಮುಖ ಸುದ್ದಿರಾಜ್ಯವಾರ್ತೆ

64ನೇ ವಾರವೂ ಮುಂದುವರಿಯಿತು ಕ್ಲೀನ್‌ ಅಪ್‌ ಮೂಡುಬಿದಿರೆ

ನಿಲ್ಲದ ಸ್ವಚ್ಛತಾ ಅಭಿಯಾನ – ಮೂಡುಬಿದಿರೆ ಹೆದ್ದಾರಿ ಕ್ಲೀನ್‌ ಕ್ಲೀನ್…!‌ 

ಮೂಡುಬಿದಿರೆ: ಹೌದು…ಮೂಡುಬಿದಿರೆಯ ಜವನೆರ್‌ ಬೆದ್ರ ಸಂಘಟನೆ ಮಳೆಗೆ ಜಗ್ಗದೆ, ಬಿಸಿಲಿಗೆ ಕುಗ್ಗದೆ, ಸೆಖೆಯನ್ನೂ ಲೆಕ್ಕಿಸದೆ ತನ್ನ ಪಾಡಿಗೆ ತಾನು ʻಪ್ರಧಾನಿ ನರೇಂದ್ರ ಮೋದಿಯವರʼ ಸ್ವಚ್ಛಭಾರತ ಕರೆಗೆ ಓಗೊಟ್ಟು ಸ್ವಚ್ಛತಾ ಅಭಿಯಾನವನ್ನು ಮುಂದುವರಿಸಿದೆ. ಇದೀಗ ಕ್ಲೀನ್‌ ಅಪ್‌ ಗೆ 64ರ ಸಂತಸ. ಕಳೆದ 63ವಾರಗಳಲ್ಲಿ ಏನೇ ಅಡ್ಡಿ ಆತಂಕ ಕಂಠಗಳಿದ್ದರೂ ಯಾವುದನ್ನೂ ಲೆಕ್ಕಿಸದೆ ಮೂಡುಬಿದಿರೆಯ ಪ್ರತಿಷ್ಠಿತ ಜವನೆರ್‌ ಬೆದ್ರ ಸಂಘಟನೆ ಕ್ಲೀನ್‌ ಅಪ್‌ ಕಾರ್ಯವನ್ನು ಮುಂದುವರಿಸುತ್ತಾ ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದೆ.

ಮೂಡುಬಿದಿರೆ ನಗರ,ಹೊರವಲಯ, ಜಾತ್ರಾ ಮಹೋತ್ಸವ, ವಿವಿಧ ಧಾರ್ಮಿಕ,ಶೈಕ್ಷಣಿಕ ಕ್ಷೇತ್ರ ಪರಿಸರಗಳನ್ನು ಗುರಿಯಾಗಿರಿಸಿಕೊಂಡು ಸ್ವಚ್ಛತಾ ಕಾರ್ಯ ನಡೆಸುತ್ತಾ ಬರುತ್ತಿದೆ.

ಇನ್ನರ್‌ ವ್ಹೀಲ್‌ ಸರ್ಕ್ಲಲ್‌ ಬಳಿ ಕ್ಲೀನ್‌ ಕ್ಲೀನ್:‌ ಮೂಡುಬಿದಿರೆಯ ಹೆದ್ದಾರಿ , ಸ್ವರಾಜ್ಯ ಮೈದಾನದ ಪರಿಸರದಲ್ಲಿರುವ ಇನ್ನರ್‌ ವೀಲ್‌ ಸರ್ಕಲ್‌ ಪರಿಸರದಲ್ಲಿ 64ನೇ ವಾರದ ಸ್ವಚ್ಛತಾ ಅಭಿಯಾನವನ್ನು ಈ ಸಂಘಟನೆ ಭಾನುವಾರ ಹಮ್ಮಿಕೊಂಡಿತು. ಸಂಘಟನೆಯ ಕಾರ್ಯಕರ್ತರು ಅತ್ಯುತ್ಸಾಹದಿಂದ ಪಾಲ್ಗೊಂಡರು. ಪ್ರದೇಶದಲ್ಲಿ ಅನಾಗರೀಕವಾಗಿ ಎಸೆದ ತ್ಯಾಜ್ಯ ಕಸಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸುವ ಕಾರ್ಯ ನಡೆಸಲಾಯಿತು. ಪ್ರಜ್ಞಾವಂತರೆನಿಸಿಕೊಂಡ ವ್ಯಕ್ತಿಗಳು ಮಾಡುತ್ತಿರುವ ಅನಾಚಾರಗಳಿಗೆ ಇಲ್ಲಿ ಸಂಗ್ರಹಗೊಂಡಿರುವ ರಾಶಿ ರಾಶಿ ಕಸ ತ್ಯಾಜ್ಯ ಪ್ಲಾಸ್ಟಿಕ್‌ಗಳೇ ಸಾಕ್ಷಿ ಎನಿಸಿದವು.

ಇನ್ನಾದರೂ ಎಚ್ಚೆತ್ತುಕೊಳ್ಳಿ: ಪ್ರಾದೇಶಿಕ ಪಕ್ಷವೊಂದರ ಕಚೇರಿ ಇಲ್ಲಿದೆ, ಸರ್ಕಾರೀ ಕಚೇರಿಗಳೂ ಇಲ್ಲಿವೆ . ಆದರೂ ಅನಾಗರೀಕ ಪ್ರವೃತ್ತಿ ಈ ಭಾಗದಲ್ಲಿ ಎದ್ದು ಕಾಣುತ್ತಿದೆ. ಅತ್ಯಂತ ಹೊಲಸೆನಿಸುವ ರೀತಿಯಲ್ಲಿ ಪರಿಸರದಲ್ಲಿ ಕಸ ತ್ಯಾಜ್ಯಗಳು ಕಂಡು ಬರುತ್ತಿವೆ. ಸ್ವಚ್ಛತೆಯ ಕಾಳಜಿ ಈ ಭಾಗದ ಜನತೆಯಲ್ಲಿ ಏಕೆ ಮೂಡುತ್ತಿಲ್ಲ ಎಂಬ ನೋವು ನಮ್ಮನ್ನು ಕಾಡುತ್ತಿದೆ ಎಂದು ಸಂಘಟನೆಯ ಸ್ಥಾಪಕಾಧ್ಯಕ್ಷ ಅಮರ್‌ ಕೋಟೆ ಖೇದ ವ್ಯಕ್ತಪಡಿಸಿದರು. ಸಂಘಟನೆಯ ಸದಸ್ಯರು ಕ್ಲೀನ್‌ ಅಪ್‌ ಕಾರ್ಯದಲ್ಲಿ ಭಾಗವಹಿಸಿದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here