ಪ್ರಮುಖ ಸುದ್ದಿರಾಜ್ಯವಾರ್ತೆ

61ನೇ ವಾರದ ಕ್ಲೀನ್ ಅಪ್ ಮೂಡುಬಿದರೆ ಸಂಪನ್ನ

ಪುತ್ತಿಗೆ ದೇವಸ್ಥಾನದ ಆವರಣ ಕ್ಲೀನ್ ಕ್ಲೀನ್…

ಮೂಡುಬಿದಿರೆ: ನಿರಂತರ 60ವಾರಗಳಿಂದ ಮೂಡುಬಿದಿರೆ ನಗರ ಹಾಗೂ ಹೊರವಲಯದಲ್ಲಿ ಸ್ವಚ್ಛತೆಯ ಕಾರ್ಯವನ್ನು ಮಾಡುತ್ತಾ ಜನಾನುರಾಗಿಯಾಗಿರುವ ಮೂಡುಬಿದಿರೆಯ ಜವನೆರ್ ಬೆದ್ರ ಸಂಘಟನೆ ಇದೀಗ 61ನೇ ವಾರದ ಸ್ವಚ್ಛತಾ ಅಭಿಯಾನವನ್ನು ಮೂಡುಬಿದಿರೆಯ ಪುತ್ತಿಗೆ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಸಿತು. ಕ್ಷೇತ್ರದ ವರ್ಷಾವಧೀ ಉತ್ಸವದ ಸಂದರ್ಭ ಕ್ಷೇತ್ರದ ಸೇವೆಯಾಗಿ ಈ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು ಎಂದು ಸಂಘಟನೆಯ ಸ್ಥಾಪಕಾಧ್ಯಕ್ಷ ಅಮರ್ ಕೋಟೆ ಹೇಳಿದರು.
ವರ್ಷಂಪ್ರತಿ ಜಾತ್ರೋತ್ಸವದಂದು ಕ್ಷೇತ್ರದ ಆವರಣದಲ್ಲಿ ಸ್ವಚ್ಛತಾ ಆಂದೋಲನವನ್ನು ನಡೆಸುತ್ತಾ ಬಂದಿದ್ದೇವೆ. ಈ ಬಾರಿಯೂ ಇದನ್ನು ಮುಂದುವರಿಸುತ್ತಿದ್ದೇವೆ. ಮುಂದೆಯೂ ನಡೆಸುತ್ತೇವೆ ಎಂದು ಹೇಳಿದರು.

ಕಂಡಲ್ಲಿ ಎಸೆಯುವ ಸಂಸ್ಕøತಿ ಕೊನೆಯಾಗಲಿ: ಜಾತ್ರೋತ್ಸವದಲ್ಲಿ ಸ್ವಚ್ಛತಾ ಸಮಿತಿಯೊಂದನ್ನು ರೂಪಿಸಿ ದೇಗುಲದ ಹೊರಗೆಯೂ ಸ್ವಚ್ಛತೆಯನ್ನು ಕಾಪಾಡುವ ಕಾರ್ಯ ಆಗಬೇಕು ಎಂದು ಅಮರ್ ಕೋಟೆ ಹೇಳಿದರು.
ಕಂಡು ಕಂಡಲ್ಲಿ ಕಸಗಳನ್ನು, ತಿನಿಸುಗಳನ್ನು ಎಸೆಯುವ ಪರಿಕಲ್ಪನೆ ದೂರವಾಗಬೇಕಾಗಿದೆ. ಕಸಗಳನ್ನು ಒಂದೆಡೆ ಸಂಗ್ರಹಿಸಿ ಅದನ್ನು ವಿಲೇವಾರಿ ಮಾಡುವ ಕಾರ್ಯಗಳು ಜಾತ್ರೋತ್ಸವದಂತಹ ಸಂದರ್ಭದಲ್ಲಿ ಆಗಬೇಕಾಗಿದೆ ಎಂದವರು ಅಭಿಪ್ರಾಯಿಸಿದರು.

ಶ್ಲಾಘನಾರ್ಹ ಕಾರ್ಯ: ಮೂಡುಬಿದಿರೆಯ ಜವನೆರ್ ಬೆದ್ರ ಸಂಘಟನೆ ಯಾವೊಂದು ಫಲಾಪೇಕ್ಷೆಯಿಲ್ಲದೆ ನಿರಂತರ 60ವಾರಗಳಿಂದ ಸ್ವಚ್ಛತಾ ಕಾರ್ಯವನ್ನು ನಡೆಸುತ್ತಾ ಬಂದಿರುವುದು ಶ್ಲಾಘನಾರ್ಹ. ಈ ಕಾರ್ಯ ಮುಂದುವರಿಯಬೇಕು. ಜನತೆ ಇದಕ್ಕೆ ಬೆಂಬಲ ನೀಡಬೇಕೆಂದು ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂಘಟನೆ ಸ್ವಚ್ಛತೆಯೊಂದಿಗೆ ಸಮಾಜಮುಖೀ ಚಿಂತನೆಯ ಕಾರ್ಯಕ್ರಮಗಳನ್ನು ನಡೆಸುತ್ತಾ ಮಾದರಿ ಕಾರ್ಯವನ್ನು ಮಾಡುತ್ತಿದೆ ಎಂದವರು ಪ್ರಶಂಸಿದರು.

ಜವನೆರ್ ಬೆದ್ರ ಸಂಘಟನೆಯ ಸದಸ್ಯರ ಸಹಿತ ರವಿಭಟ್, ವಿದ್ಯಾಭಟ್,ಅವಿನಾಶ್, ನಾಗವರ್ಮ ಜೈನ್ ಸೇರಿದಂತೆ ಊರ ಪ್ರಮುಖರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here