6ನೇ ದಿನವೂ ನೋಟ್ ಬ್ಯಾನ್ ಗದ್ದಲ

0
330

ನವದೆಹಲಿ ಪ್ರತಿನಿಧಿ ವರದಿ
ಇಂದು ಆರನೇ ದಿನವೂ ರಾಜ್ಯಸಭೆಯಲ್ಲಿ ನೋಟ್ ಬ್ಯಾನ್ ಗದ್ದಲ ಏರ್ಪಟ್ಟಿದೆ. ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಕೋಲಾಹಲ ಮುಂದುವರಿದಿದೆ. ನೋಟು ಚಲಾವಣೆ ರದ್ದತಿಯ ಕುರಿತು ಭಾರಿ ಕೋಲಾಹಲ ನಡೆಯುತ್ತಿದೆ.
 
 
 
 
ಪ್ರಧಾನಿ ಏಕೆ ಸದನಕ್ಕೆ ಬರದೇ ಹೊರಗುಳಿದಿದ್ದಾರೆಂದು ಪ್ರಶ್ನಿಸಿದ್ದಾರೆ. ಖುದ್ದು ಪ್ರಧಾನಿ ಬಂದು ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಕಲಾಪದಲ್ಲಿ ಪ್ರತಿಪಕ್ಷಗಳ ಸದಸ್ಯರು ಪಟ್ಟುಹಿಡಿದಿದ್ದಾರೆ.
 
 
 
ಸರ್ಕಾರ ಸಂವಿಧಾನ ಉಲ್ಲಂಘಿಸಿದೆ ಎಂದು ಆನಂದ್ ಶರ್ಮಾ ಹೇಳಿದ್ದಾರೆ. ಯಾವ ನಿಯಮದ ಅಡಿಯಲ್ಲಿ ಉಲ್ಲಂಘನೆಯಾಗಿದೆ? ಎಂದು ಆನಂದ್ ಶರ್ಮಾರನ್ನು ಉಪಸಭಾಪತಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಉಪಸಭಾಪತಿ ಪ್ರಶ್ನೆಗೆ ಉತ್ತರಿಸಲು ಶರ್ಮಾ ಅವರು ತಡಬಡಾಯಿಸಿದ್ದಾರೆ.
ರಾಜ್ಯಸಭಾ ಸಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ.
 
ನ:28ಕ್ಕೆ ಭಾರತ ಬಂದ್
ಇನ್ನೊಂದೆಡೆ ನೋಟ್ ಬ್ಯಾನ್ ವಿಚಾರವನ್ನು ಖಂಡಿಸಿ ಟಿಎಂಸಿ ಪ್ರತಿಭಟನೆ ಕೈಗೊಂಡಿದ್ದು, ನವೆಂಬರ್​​ 28ಕ್ಕೆ ಭಾರತ ಬಂದ್’​ಗೆ ಕರೆ ನೀಡಿದೆ. ಟಿಎಂಸಿ ಪಕ್ಷದ ಭಾರತ್ ಬಂದ್ ಕರೆಯನ್ನು ಎಲ್ಲಾ ಪ್ರತಿಪಕ್ಷಗಳು ಬೆಂಬಲಿಸಿವೆ.

LEAVE A REPLY

Please enter your comment!
Please enter your name here