59 ಕೋಟಿ ರೂ.ನಂಬರ್

0
260

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ದುಬೈನಲ್ಲಿ ಕಾರಿನ ಫ್ಯಾನ್ಸಿ ನಂಬರ್ ಗಾಗಿ ಭರ್ಜರಿ ಬಿಡ್ಡಿಂಗ್ ನಡೆದಿದೆ. ಸಿಂಗಲ್ ಡಿಜಿಟ್ ನಂಬರ್ ಗಾಗಿ ಭಾರೀ ಹರಾಜು ಪ್ರಕ್ರಿಯೆ ನಡೆದಿದೆ.
 
 
ದುಬೈನ ರಸ್ತೆ ಮತ್ತು ಸಾರಿಗೆ ನಿಗಮದಿಂದ ಭಾನುವಾರ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜಿನಲ್ಲಿ ಭಾರತೀಯ ಉದ್ಯಮಿಯೊಬ್ಬರು ಗೆದ್ದಿದ್ದಾರೆ.
 
 
ನಂಬರ್ 5 ಪಡೆಯೋದಕ್ಕಾಗಿ 300 ಮಂದಿ ಬಿಡ್ಡಿಂಗ್ ಹಾಕಿದ್ದರು. ಕೊನೆಗೂ 59 ಕೋಟಿ ರೂ.ಗೆ ಭಾರತೀಯ ಉದ್ಯಮಿ ಹಾಗೂ ಆರ್ ಎಸ್ ಜಿ ಇಂಟರ್ ನ್ಯಾಷನಲ್ ಕಂಪನಿ ಮಾಲೀಕ  ಬಲ್ವಿಂದರ್ ಸಹಾನಿ(Balwinder Sahani)  ಖರೀದಿಸಿದ್ದಾರೆ.
 
 
ಕಳೆದ ಬಾರಿ 20 ಮಿಲಿಯನ್ ದಾಲರ್ ಗೆ ನಂಬರ್ 9 ಖರೀದಿ ಮಾಡಿದ್ದರು. ಈ ಬಾರಿ 9 ಮಿಲಿಯನ್ ಡಾಲರ್ ಗೆ ನಂಬರ್ 5 ನ್ನು ಖರೀದಿಸಿದ್ದಾರೆ.
 
 
2008 ರಲ್ಲಿ ಸಯೀದ್‌ ಅಲ್‌ ಕೋಹ್ರಿ ಅವರು 52 ಮಿಲಿಯನ್‌ ದಿರಮ್ಸ್‌ ನೀಡಿ ನಂಬರ್‌ 1 ಸಂಖ್ಯೆ ಪ್ಲೇಟ್‌ ಖರೀದಿ ಮಾಡಿದ್ದು ಅಬುಧಾಬಿಯಲ್ಲಿ ನಡೆದಿದ್ದ ಈ ಹರಾಜು ದೇಶದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿತ್ತು.

LEAVE A REPLY

Please enter your comment!
Please enter your name here