500 ರೂ. ನೋಟು ಚಲಾವಣೆ ಇಂದು ಕಡೇ ದಿನ

0
617

ರಾಷ್ಟ್ರೀಯ ಪ್ರತಿನಿಧಿ ವರದಿ
500ರೂ. ಮತ್ತು 1000ರೂ. ಮುಖಬೆಲೆಯ ನೋಟುಗಳು ಬ್ಯಾನ್ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿಯಿಂದ ಹಳೆನೋಟುಗಳ ಚಲಾವಣೆ ಬಂದ್ ಆಗಲಿದೆ. ಇಂದು ಮಧ್ಯರಾತ್ರಿಯಿಂದ ಹಳೆಯ 500ರೂ. ನೋಟು ಸ್ವೀಕಾರ ಇರುವುದಿಲ್ಲ. ಸರ್ಕಾರಿ ಬಿಲ್ , ಆಸ್ಪತ್ರೆಗಳಲ್ಲಿ ಹಳೆ ನೋಟು ಸ್ವೀಕಾರವಿರುವುದಿಲ್ಲ.
 
 
 
 
ಡಿಸೆಂಬರ್ ಮೊದಲ ವಾರದಲ್ಲಿ ಸಾರ್ವಜನಿಕವಾಗಿ ರು 1000, 500 ನೋಟುಗಳನ್ನು ಬಳಸದಿರುವಂತೆ ಸರ್ಕಾರ ನಿರ್ಬಂಧ ಹೇರಿತ್ತು. ಬಿಲ್ ಪಾವತಿ, ಔಷಧಿ ಖರೀದಿ, ಬಸ್ ಪಾಸ್, ಮೊಬೈಲ್ ರೀಚಾರ್ಜ್ ಮುಂತಾದವುಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಡಿಸೆಂಬರ್ 16ರಿಂದ ಆ ಅವಕಾಶಗಳೂ ಇಲ್ಲವಾಗಲಿವೆ. ಬ್ಯಾಂಕುಗಳಲ್ಲಿ ಮಾತ್ರ ನಗದನ್ನು ಖಾತೆಗೆ ಜಮೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here