48ನೇ ರ್ಯಾಂಕ್ ಪಡೆದ ಕನ್ನಡಿಗ

0
337

 
ನವದೆಹಲಿ ಪ್ರತಿನಿಧಿ ವರದಿ
ಯುಪಿಎಸ್ ಸಿ ಫಲಿತಾಂಶ
ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಮಂಗಳವಾರ 2015ನೇ ಸಾಲಿನ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯಲ್ಲಿ 1,078 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ.
 
 
ದೆಹಲಿ ಯುವತಿ ಟೀನಾ ಡಾಬಿ ಮೊದಲ ಪ್ರಯತ್ನದಲ್ಲೇ ಮೊದಲ ರ್ಯಾಂಕ್ ಪಡೆದಿದ್ದು, ಜಮ್ಮು ಮತ್ತು ಕಾಶ್ಮೀರದ ರೇಲ್ವೆ ಅಧಿಕಾರಿ ಅತಾರ್ ಅಮಿರ್ ಉಲ್ ಶಫಿ ಖಾನ್ ಅವರು ಎರಡನೇ ರ್ಯಾಂಕ್ ಪಡೆದಿದ್ದಾರೆ. ನಂತರ ಜಸ್ಮೀರ್ ಸಿಂಗ್ ಸಂಧು , ಆರ್ತಿಕಾ ಶುಕ್ಲಾ, ಶಶಾಂಕ್ ತ್ರಿಪಾಠಿ ಮೊದಲ 5 ಸ್ಥಾನ ಗಳಿಸಿದ್ದಾರೆ.
 
 
ಈ ಬಾರಿ ಕರ್ನಾಟಕದ 30 ಕ್ಕೂ ಹೆಚ್ಚು ಮಂದಿ ಕೇಂದ್ರ ನಾಗರಿಕ ಸೇವೆಗೆ ಆಯ್ಕೆಯಾಗಿದ್ದು, ಕರ್ನಾಟಕದ ದರ್ಶನ್ 48ನೇ ಹಾಗೂ ಶ್ರೀನಿವಾಸ್ ಗೌಡ ಎ. ಆರ್ ಅವರು 105ನೇ ಸ್ಥಾನ ಗಳಿಸಿದ್ದಾರೆ.
 
 
 
ಕರ್ನಾಟಕದ ಅಭ್ಯರ್ಥಿಗಳ ಫಲಿತಾಂಶ:
ದರ್ಶನ್ 48 ರ್ಯಾಂಕ್, ಶ್ರೀನಿವಾಸಗೌಡ 105, ನಿವ್ಯಾ ಶೆಟ್ಟಿ 274, ಪವನ್ ಕುಮಾರ್ ಗಿರಿಯಪ್ಪ 420, ಪ್ರಮೋದ್ ನಾಯಕ್ 779, ಡಿಎಲ್ ನಾಗೇಶ್ 782, ಆಕಾಶ್ ಎಸ್ 959, ಭೈರಪ್ಪ 1035, ವಿದ್ಯಾವತಿ ಎಸ್. 600ನೇ ರ್ಯಾಂಕ್ ಪಡೆದಿದ್ದಾರೆ.
 
 
 
1078 ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದ 499, ಇತರ ವರ್ಗದ 314, ಪರಿಶಿಷ್ಟ ಜಾತಿಯ 176, ಪರಿಶಿಷ್ಟ ಪಂಗಡದ 89 ಮಂದಿಯನ್ನು ಸರ್ಕಾರದ ವಿವಿಧ ಸೇವೆಗಳಿಗೆ ನೇಮಕ ಮಾಡಲು ಶಿಫಾರಸು ಮಾಡಿರುವುದಾಗಿ ಯುಪಿಎಸ್‌ಸಿ ತಿಳಿಸಿದೆ. 172 ಮಂದಿ ಅಭ್ಯರ್ಥಿಗಳು ‘ವೇಟಿಂಗ್‌ ಲಿಸ್ಟ್’ನಲ್ಲಿದ್ದಾರೆ.

LEAVE A REPLY

Please enter your comment!
Please enter your name here