4ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

0
589

ಬೆಂಗಳೂರು ಪ್ರತಿನಿಧಿ ವರದಿ
ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ ಇಂದೂ ಸಹ ಮುಂದುವರಿದಿದೆ. ಬೆಂಗಳೂರಿನ ಫ್ರೀಡಂ ಫಾರ್ಕ್ ನಲ್ಲಿ ಕಾರ್ಯಕರ್ತರ ಆಹೋ ರಾತ್ರಿ ಧರಣಿ 4ನೇ ದಿನಕ್ಕೆ ಕಾಲಿಟ್ಟಿದೆ.
 
 
 
ಒಂದೆಡೆ ಕಾರ್ಯಕರ್ತೆ ಧರಣಿ ತೀವ್ರ ಸ್ವರೂಪವನ್ನು ಪಡೆದರೆ, ಮತ್ತೊಂದೆಡೆ ಧರಣಿ ನಿರತ ಕಾರ್ಯಕರ್ತೆಯರು ಅಸ್ವಸ್ಥರಾಗುತ್ತಿದ್ದಾರೆ. ಈವರೆಗೆ ಸುಮಾರು 190 ಕಾರ್ಯಕರ್ತರು ಅಸ್ವರಾಗಿದ್ದಾರೆ. ಇದರಿಂದ ಸ್ಥಳದಲ್ಲೇ ವೈದ್ಯಕೀಯ ಸೌಲಭ್ಯ ನೀಡುವುದಕ್ಕಾಗಿ ವೈದ್ಯರು ಧರಣಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
 
 
 
ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂತೆಗೆಯುವ ಮಾತೇ ಇಲ್ಲ. ಮಲಗಿದ್ದ ಹಾವನ್ನ ಸರ್ಕಾರ ತುಳಿದೆಬ್ಬಿಸಿದೆ. ನಮ್ಮ ಹೋರಾಟ ಹೇಗಿರಲಿದೆ ಎಂದು ವರಲಕ್ಷ್ಮೀ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here