3 ವಾರಗಳಷ್ಟೇ ಕಾಲಾವಕಾಶ

0
421

 
ರಾಷ್ಟ್ರೀಯ ಪ್ರತಿನಿಧಿ ವರದಿ
11 ನಗರಗಳಲ್ಲಿ ಡೀಸೆಲ್ ವಾಹನ ನಿಷೇಧಿಸುವ ವಿಚಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ಅಂಕಿ-ಅಂಶ ಸಲ್ಲಿಕೆಯಾಗಿದೆ. ಕರ್ನಾಟಕ ಸೇರಿದಂತೆ 9 ರಾಜ್ಯಗಳಿಂದ ಅಂಕಿ-ಅಂಶ ಸಲ್ಲಿಕೆಯಾಗಿದೆ.
 
 
 
ಮಾಲಿನ್ಯದ ಬಗ್ಗೆ ಅಧ್ಯಯನಕ್ಕೆ ಕಾಲಾವಕಾಶ ಕೋರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಕರಣ ರಾಜ್ಯಗಳಿಗೆ 3 ವಾರ ಕಾಲಾವಕಾಶ ನೀಡಿದೆ. ಮುಂದಿನ ವಿಚಾರಣೆಯನ್ನು ಜು.11ಕ್ಕೆ ಮುಂದೂಡಿದೆ.
 
 
 
ಮೂರು ವಾರದೊಳಗೆ ರಾಜ್ಯಗಳಲ್ಲಿನ ಅತೀ ಹೆಚ್ಚು ಮಾಲಿನ್ಯದ 2 ನಗರ, ಅಲ್ಲಿನ ಜನಸಂಖ್ಯೆ, ಆ ನಗರಗಳಲ್ಲಿನ ವಾಹನಗಳ ಸಂಖ್ಯೆ, ಮಾಲಿನ್ಯದ ಮೂಲ, ಧೂಳು, ಹೊಗೆ, ಯಾವ ಪ್ರಮಾಣದಲ್ಲಿ ಮಾಲಿನ್ಯ ಆಗುತ್ತಿದೆ, ವಾಹನಗಳ ಸಾಂಧ್ರತೆ ಎಷ್ಟು ಎಂದು ವಿವರವಾಗಿ ಸಲ್ಲಿಸಬೇಕು. 2 ನಗರಗಳಲ್ಲಿನ ದ್ವಿಚಕ್ರ ವಾಹನ, ತ್ರಿಚಕ್ರವಾಹನಗಳ ಸಂಖ್ಯೆ, ಪೆಟ್ರೋಲ್ ವಾಹನ, ಡೀಸೆಲ್ ವಾಹನಗಳ ಸಂಖ್ಯೆಯನ್ನು ನಿರ್ಧಿಷ್ಟವಾಗಿ ಸಲ್ಲಿಸಬೇಕು ಎಂದು ಕೋರ್ಟ್ ಹೇಳಿದೆ.

LEAVE A REPLY

Please enter your comment!
Please enter your name here