3 ಕರಡಿಗಳ ದಾಳಿ

0
246

ಚಿಕ್ಕಮಗಳೂರು ಪ್ರತಿನಿಧಿ ವರದಿ
ರೈತನ ಮೇಲೆ 3 ಕರಡಿಗಳು ದಾಳಿ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವನಬೋಗಿಹಳ್ಳಿಯಲ್ಲಿ ಸಂಭವಿಸಿದೆ.
 
 
ರೈತ ವೀರಭದ್ರಪ್ಪ ಬಲಗಾಲಿಗೆ ಗಂಭೀರ ಗಾಯಗಳಾಗಿವೆ. ಗಾಯಾಳಿಗೆ ಕಡೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡ ರೈತ ಬೆಳಗ್ಗೆ 7 ಗಂಟೆ ವೇಳೆ ತೋಟಕ್ಕೆ ತೆರಳುತ್ತಿದ್ದಾಗ ಕರಡಿಗಳು ದಾಳಿ ನಡೆಸಿದೆ.
 
 
ದಾಳಿ ವೇಳೆ ಕೈಯಲ್ಲಿದ್ದ ಪೈಪ್ ನಿಂದ ಹೊಡೆದಾಗ ಕರಡಿಗಳು ಪರಾರಿಯಾಗಿದೆ. ಆದರೆ ಘಟನೆ ವಿಷಯ ತಿಳಿಸಿದರೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ಇದರಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

LEAVE A REPLY

Please enter your comment!
Please enter your name here