ಬಳ್ಳಾರಿ ಪ್ರತಿನಿಧಿ ವರದಿ
ಬಳ್ಳಾರಿಯ ಬಿಟಿಪಿಎಸ್ ನ 3ನೇ ಘಟಕಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೂರನೇ ಘಟಕಕ್ಕೆ ಚಾಲನೆ ನೀಡಲಾಗಿದೆ.
ಈ ಘಟಕ 700 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಘಟಕವಾಗಿದೆ. ರಾಜ್ಯದಲ್ಲೇ ಹೆಚ್ಚು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಘಟಕವಾಗಿದೆ.
ಮೂರನೇ ಘಟಕ ಆರಂಭವಾಗಲು ತುಂಬಾನೇ ವಿಳಂಬವಾಯಿತು. ವಿಳಂಬಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿ. (ಕೆಪಿಟಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಕುಮಾರ್ ನಾಯಕ್ ಬಳ್ಳಾರಿಯ ಕುಡಿತಿನಿಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಹೇಳಿದ್ದಾರೆ.
ಬಿಟಿಪಿಎಸ್ ಗೆ ಸದ್ಯ ತುಂಗಭದ್ರಾ ಡ್ಯಾಂನಿಂದ ನೀರು ಪೂರೈಕೆಯಾಗುತ್ತಿದೆ. ಮುಂದೆ ನಾರಾಯಣಪುರ ಡ್ಯಾಂನಿಂದ ನೀರು ಪೂರೈಕೆಯಾಗಲಿದೆ. ಇದಕ್ಕೆ ಈಗಾಗಲೇ ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಕುಮಾರ್ ನಾಯಕ ಮಾಹಿತಿ ನೀಡಿದ್ದಾರೆ.