ಉಡುಪಿ ಪ್ರತಿನಿಧಿ ವರದಿ
ಉಡುಪಿಯ ಹೋಟೆಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ 3ನೇ ಆರೋಪಿ ನಿರಂಜನ್ ಅಸ್ರಣ್ಣ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಜ್ರದ ಉಂಗುರ ನುಂಗಿ ಆತ್ಮಹತ್ಯೆ ಪ್ರಯತ್ನಿಸಿದ್ದಾನೆ.
ನಿರಂಜನ್ ಗೆ ಅಜ್ಜರಕಾಡುವಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿರಂಜನ್ ಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಪ್ರಾಣಾಪಾಯದಿಂದ ಆರೋಪಿ ಪಾರಾಗಿದ್ದಾನೆ. ನಿನ್ನೆ ಮಣಿಪಾಲ ಪೊಲೀಸರು ನಿರಂಜನ್ ನನ್ನು ವಶಕ್ಕೆ ಪಡೆದಿದ್ದರು.
ಆಸ್ತಿಗಾಗಿ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಭಾಸ್ಕರ್ ಪತ್ನಿ, ಪುತ್ರ ಕೊಲೆಗೈದಿದ್ದರು. ಪತ್ನಿ, ಪುತ್ರನಿಗೆ ಕೊಲೆಗೆ ಜ್ಯೋತಿಷಿ ನಿರಂಜನ್ ಸಹಕರಿಸಿದ್ದ. ಇಂದ್ರಾಣಿ ಗ್ರಾಮದ ಮನೆಯಲ್ಲಿ ಭಾಸ್ಕರ್ ಶೆಟ್ಟಿಯ ಕೊಲೆ ಮಾಡಲಾಗಿದೆ. ಕಬ್ಬಿಣದ ರಾಡ್ ನಿಂದ ಹೊಡೆದು ಕೊಂದು ಸುಟ್ಟುಹಾಕಿದ್ದರು. ಬಳಿಕ ಪತ್ಮಿ-ಮಗ ಸೇರಿ ನಂದಳಿಕೆಯಲ್ಲಿ ಹೋಮಕುಂಡದಲ್ಲಿ ಶವ ಸುಟ್ಟುಹಾಕಿದ್ದರು. ಈಗಾಗಲೇ ಪತ್ಮಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿಯನ್ನು ಬಂಧಿಸಲಾಗಿದೆ. ನಿನ್ನೆ ಜ್ಯೋತಿಷಿ ನಿರಂಜನ್ ಭಟ್ ನನ್ನು ವಶಕ್ಕೆ ಪಡೆಯಲಾಗಿತ್ತು.