26/11 ಮುಂಬೈ ದಾಳಿಯ ರೂವಾರಿಗೆ ಗೃಹಬಂಧನ

0
667

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
26/11 ಮುಂಬೈ ದಾಳಿಯ ಪ್ರಮುಖ ರುವಾರಿ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸೈಯೀದ್ ನನ್ನು ಪಾಕಿಸ್ತಾನದ ಲಾಹೋರ್’ನಲ್ಲಿ ಗೃಹ ಬಂಧನದಲ್ಲಿಟ್ಟಿರುವುದಾಗಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
 
 
 
ಹಫೀಜ್ ಸಯೀದ್ ಗೆ ಗೃಹ ಬಂಧನ ವಿಧಿಸಿರುವ ಪಾಕಿಸ್ತಾನ ಸರ್ಕಾರ ಈತನ ಉಗ್ರ ಸಂಘಟನೆಗೂ ನಿಷೇಧ ಹೇರುವ ಸಾಧ್ಯತೆಗಳಿವೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ತನ್ನ ವರದಿಯಲ್ಲಿ ತಿಳಿಸಿದೆ. ಹಪೀಝ್ ಸೈಯದ್ ನನ್ನು ಲಾಹೋರ್ ನಲ್ಲಿರುವ ಚೌಬುರ್ಜಿಯ ಖ್ವಾದ್ವಿಸಿಯ ಮಸೀದಿ ಬಳಿಯ ಗೃಹ ಬಂಧನದಲ್ಲಿಡಲಾಗಿದೆ ಎಂದು ಹೇಳಲಾಗುತ್ತಿದೆ.
 
 
 
ಗೃಹ ಬಂಧನದಲ್ಲಿರುವ ಉಗ್ರ ಸಯೀದ್ 2008ರ 26/11 ಮುಂಬೈದಾಳಿಯ ಪ್ರಮುಖ ರುವಾರಿಯಾಗಿದ್ದು, ಭಾರತ-ಅಮೆರಿಕಾ ರಾಷ್ಟ್ರಗಳಿಗೆ ಬೇಕಿರುವ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದಾನೆ.

LEAVE A REPLY

Please enter your comment!
Please enter your name here