2017-18ನೇ ಸಾಲಿಗೆ 36.85 ಲಕ್ಷ ಮಿಗತೆ ಬಜೆಟ್

0
254

 
ಮೂಡಬಿದಿರೆ ಪ್ರತಿನಿಧಿ ವರದಿ
ಮೂಡಬಿದಿರೆ ಪುರಸಭೆ
ಮೂಡಬಿದಿರೆ ಪುರಸಭೆಯ 2017-18ನೇ ಸಾಲಿನ ಮುಂಗಡ ಆಯವ್ಯಯಗಳನ್ನು ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ ಪುರಸಭಾ ವಿಶೇಷ ಸಭೆಯಲ್ಲಿ ಮಂಡಿಸಿದರು. ಒಟ್ಟು ರುಪಾಯಿ 36.85ಲಕ್ಷದ ಮಿಗತೆ ಬಜೆಟ್ ಅನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ ವಹಿಸಿದ್ದರು. ಉಪಾಧ್ಯಕ್ಷ ವಿನೋದ್ ಸೆರಾವೋ, ಸ್ಥಾಯೀ ಸಮಿತಿ ಅಧ್ಯಕ್ಷ ಕೊರಗಪ್ಪ ಉಪಸ್ಥಿತರಿದ್ದರು. 2017-18ರಲ್ಲಿ 20.52ಕೋಟಿ ಜಮೆಯಾಗುವ ಬಗ್ಗೆ ಹಾಗೂ 20.89ಕೋಟಿ ಖರ್ಚಾಗುವ ಸಾಧ್ಯತೆಯ ಬಗ್ಗೆ ಬಜೆಟ್ ನಲ್ಲಿ ತಿಳಿಸಲಾಯಿತು.
 
mood_purasabhe
 
ಜಮೆಯ ವಿವರ:
ಕಟ್ಟಡ ತೆರಿಗೆಯಿಂದ 130.00 ಲಕ್ಷ ,ಕಟ್ಟಡಗಳ ಬಾಡಿಗೆಯಿಂದ 80.00 ಲಕ್ಷ, ಕಟ್ಟಡ ಪರವಾನಿಗೆಯಿಂದ 30.00 ಲಕ್ಷ, ಉದ್ಯಮ ಪರವಾನಿಗೆಯಿಂದ 15.00 ಲಕ್ಷ,ಬಸ್ ಸ್ಟ್ಯಾಂಡ್ ಫೀಸ್ ಗೆ 1.50 , ನೀರಿನ ಶುಲ್ಕಕ್ಕೆ 85.00 ಲಕ್ಷ ,ನೀರಿನ ಸಂಪರ್ಕ ಶುಲ್ಕಕ್ಕೆ ವಸೂಲಿ 8.00 ಲಕ್ಷ ,ಮನೆ ಮನೆ ಕಸದ ಶುಲ್ಕ ವಸೂಲಿ 35.00 ಲಕ್ಷ ,ಖಾತಾ ಬದಲಾವಣೆಗೆ 3.00 ಲಕ್ಷ ,ಜಾಹಿರಾತು ತೆರಿಗೆಗೆ 9.00 ಲಕ್ಷ , ಎಸ್ ಎಫ್ ಸಿ ಮುಕ್ತನಿಧಿ 237.00 ಲಕ್ಷ ,14ನೇ ಹಣಕಾಸು ಸಾಮಾನ್ಯ ಮೂಲ ಅನುದಾನಕ್ಕೆ 199.63 ಲಕ್ಷ ,14ನೇ ಹಣಕಾಸು ಸಾಮಾನ್ಯ ಕಾರ್ಯಾಧಾರಿತ ಅನುದಾನಕ್ಕೆ 62.09 ಲಕ್ಷ ,ಎಸ್ ಎಫ್ ಸಿ ಪ್ರೋತ್ಸಾಹಧನ ಅನುದಾನಕ್ಕೆ 10.00 ಲಕ್ಷ ನಿರೀಕ್ಷಿಸಲಾಗಿದೆ.
 
 
ಖರ್ಚಿನ ವಿವರ:
ಎಸ್ ಎಫ್ ಸಿ ಮುಕ್ತನಿಧಿ ಅನುದಾನದಲ್ಲಿ 80.40 ಲಕ್ಷ ರಸ್ತೆ ಕಾಮಗಾರಿಗೆ, 50.00 ಲಕ್ಷ ಪೌರ ಕಾಮರ್ಿಕರ ವೇತನ ಬಾಬ್ತು, 7.00 ಲಕ್ಷ ಚರಂಡಿ ನಿರ್ಮಾಣಕ್ಕೆ ಕಾದಿರಿಸಲಾಗಿದೆ.
14ನೇ ಹಣಕಾಸು ಸಾಮಾನ್ಯ ಮೂಲ ನಿರೀಕ್ಷಿತ ಅನುದಾನದಲ್ಲಿ ಚರಂಡಿ ರಚನೆಗೆ 29.90 ಲಕ್ಷ, ಉದ್ಯಾನವನ 5.00 ಲಕ್ಷ, ಕಟ್ಟಡ ದುರಸ್ತಿ 9.98 ಲಕ್ಷ, ಕಟ್ಟಡ ರಚನೆಗೆ 10.00ಲಕ್ಷ, ಕುಡಿಯುವ ನೀರು ಕಾಮಗಾರಿಗೆ 39.90ಲಕ್ಷ, ದಾರಿದೀಪ 19.95 ಲಕ್ಷ, ಘನತ್ಯಾಜ್ಯ ಚಾಸಿಸ್ ಮೌಂಟೆಡ್ ಸಕ್ಕಿಂಗ್ ಯಂತ್ರಕ್ಕೆ 30.02 ಲಕ್ಷ ಕಾದಿರಿಸಲಾಗಿದೆ. 14 ನೇ ಹಣಕಾಸು ಸಾಮಾನ್ಯ ಕಾರ್ಯಾಧಾರಿತ ಅನುದಾನಕ್ಕೆ ಚರಂಡಿ ರಚನೆಗೆ 9.30 ಲಕ್ಷ, ರಸ್ತೆ ಕಾಮಗಾರಿಗೆ 9.30 ಲಕ್ಷ, ಉದ್ಯಾನವನ 3.10 ಲಕ್ಷ, ಕಟ್ಟಡ ದುರಸ್ತಿ 3.10 ಲಕ್ಷ, ಕಟ್ಟಡ ರಚನೆಗೆ 6.29 ಲಕ್ಷ, ಕುಡಿಯುವ ನೀರು ಕಾಮಗಾರಿಗೆ 12.40 ಲಕ್ಷ, ದಾರಿದೀಪ 6.20 ಲಕ್ಷ, ಘನತ್ಯಾಜ್ಯ 12.40 ಲಕ್ಷ ಕಾದಿರಿಸಲಾಗಿದೆ.
 
 
ಪುರಸಭಾ ನಿಧಿಯಿಂದ ರಸ್ತೆ ಮತ್ತು ಚರಂಡಿ ದುರಸ್ತಿಗೆ 40.00 ಲಕ್ಷ, ಸೇತುವೆ ದುರಸ್ತಿಗೆ 40.00ಲಕ್ಷ, ನೀರಿನ ಪಂಪ್ ದುರಸ್ತಿ ಮತ್ತು ಲೀಕೇಜ್ 30.00 ಲಕ್ಷ ಕಾದಿರಿಸಲಾಗಿದೆ. ದಾರಿದೀಪ ನಿರ್ವಹಣೆಗೆ 18.00 ಲಕ್ಷ, ಮಳೆ ನೀರಿನ ಚರಂಡಿ ದುರಸ್ಥಿ 0.50 ಲಕ್ಷ, ಅಂಗನವಾಡಿ ಕಟ್ಟಡ ದುರಸ್ಥಿ 15.00 ಲಕ್ಷ, ತಂಗುದಾಣ ನಿರ್ಮಾಣ 10.00 ಲಕ್ಷ, ನೌಕರರ ವಸತಿ ಗೃಹ ನಿರ್ಮಾಣ 10.00 ಲಕ್ಷ, ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣ 2ನೇ ಮಹಡಿ 15.00 ಲಕ್ಷ, ಆಡಿಟ್ ಚಾರ್ಜ್ 7.00 ಲಕ್ಷ, ಕಚೇರಿ ಉಪಕರಣ 5.00 ಲಕ್ಷ, ಕಚೇರಿ ಪೀಠೋಪಕರಣ 2.00 ಲಕ್ಷ ಕಾದಿರಿಸಲಾಗಿದೆ.
 
 
 
ಸೋಲಾರ್ ವ್ಯವಸ್ಥೆ – ಕೆರೆ ಅಭಿವೃದ್ಧಿಗೆ ಹಣ ಇರಿಸಿ
ಪುರಸಭಾ ವಾಣಿಜ್ಯ ಸಂಕೀರ್ಣಗಳಿಗೆ ವಿದ್ಯುತ್ ವ್ಯವಸ್ಥೆಗೆ ಸೋಲಾರ್ ಅಳವಡಿಸುವುದು ಹಾಗೂ ಕೆರೆಗಳ ಅಭಿವೃದ್ಧಿಗೆ ತಲಾ 30 ಹಾಗೂ 20ಲಕ್ಷ ರುಪಾಯಿ ಬಜೆಟ್ ನಲ್ಲಿ ಇರಿಸಬೇಕು. ಹಾಗೂ ಆ ಬಗ್ಗೆ ಸಮರ್ಥ ಕಾರ್ಯ ನಿರ್ವಹಣೆ ಆಗಬೇಕೆಂದು ಹಿರಿಯ ಸದಸ್ಯ ಪಿ.ಕೆ.ಥೋಮಸ್ ಸಭೆಯ ಗಮನ ಸೆಳೆದರು. ನವೀಕರಿಸುವ ಇಂಧನಗಳ ಬಗ್ಗೆ ಹೆಚ್ಚು ಗಮನ ಹರಿಸುವುದು ಸೂಕ್ತ ಎಂದು ಅವರು ತಿಳಿಸಿದರು.
 
 
 
ವಿಂಡ್ ಎನರ್ಜಿ ಬರಲಿ: ಬಾಹುಬಲಿ ಪ್ರಸಾದ್
ಸೋಲಾರ್ ನಂತೆ ವಿಂಡ್ ಎನರ್ಜಿ ಬಗ್ಗೆಯೂ ಚಿಂತನೆ ನಡೆದರೆ ಸೂಕ್ತ. ಮಳೆಗಾಲದಲ್ಲೂ ವಿದ್ಯುತ್ ಉತ್ಪಾದನೆಗೆ ಅದು ಸಹಕಾರಿಯಾಗಲಿದೆ ಎಂದು ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್ ಸಭೆಯ ಗಮನ ಸೆಳೆದರು.

LEAVE A REPLY

Please enter your comment!
Please enter your name here