2017ರ 3ನೇ ತಿಂಗಳು ಮಾರ್ಚ್ ಭವಿಷ್ಯ ತಿಳಿಯಿರಿ…

0
1678

ವಾರ್ತೆ ಭವಿಷ್ಯ

ಮೇಷ
ಈ ಮಾಸದಲ್ಲಿ ಕಠಿಣ ಪರಿಶ್ರಮದಿಂದ ನೀವು ಹಣ ಮಾಡುತ್ತೀರಿ. ಪಾಲಕರ ಸಹಾಯ ನಿಮಗಿದೆ. ಹೊಸ ಕೆಲಸದ ಯೋಜನೆಗಳನ್ನು ಮಾಡಲಾಗುತ್ತದೆ, ಇದು ನಿಮಗೆ ಯಶಸ್ಸು ನೀಡುತ್ತದೆ. ತೀರ್ಥಯಾತ್ರೆಗೆ ತೆರಳುವ ಅವಕಾಶವೂ ಇದೆ. ನಿಮ್ಮೊಳಗಿರುವ ಶೌರ್ಯದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನಿಮ್ಮ ಪ್ರೇಮ ಜೀವನದಲ್ಲಿ ನೀವು ಸಮತೋಲನವನ್ನು ನಿರ್ವಹಿಸುವುದು ಉತ್ತಮ. ಆರೋಗ್ಯ ವಿಚಾರದಲ್ಲಿ ಎಚ್ಚರ ವಹಿಸಬೇಕು. ಮನೆಯಲ್ಲಿ ಶುಭಸಮಾರಂಭ ಮುಂದೂಡುತ್ತದೆ. ಸರ್ಕಾರಿ ನೌಕರಿಯಲ್ಲಿರುವವರು ಅನಿರೀಕ್ಷಿತ ಕೀರ್ತಿ-ಪ್ರತಿಷ್ಠೆ ಗಳಿಸುವರು.
 
 
 
ವೃಷಭ
ಈ ಮಾಸದಲ್ಲಿ ನಿಮ್ಮ ಎಲ್ಲ ಕುಟುಂಬ ಸದಸ್ಯರೂ ನಿಮಗೆ ಬೆಂಬಲ ನೀಡುತ್ತಾರೆ. ಮಕ್ಕಳು ನಿಮ್ಮ ಜೀವನದಲ್ಲಿ ಖುಷಿ ನೀಡುತ್ತಾರೆ. ನಿಮ್ಮ ಜೀವನ ಸಂಗಾತಿಯ ಜತೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ. ತಿಂಗಳ ಅಂತ್ಯದಲ್ಲಿ ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ಹೂಡಿದ ಹಣ ನಿಮಗೆ ಲಾಭ ಕೊಡುತ್ತದೆ. ಪ್ರಮುಖವಲ್ಲದ ವೆಚ್ಚಗಳನ್ನು ದೂರವಿಡುವುದರಿಂದ ಉಳಿತಾಯ ಹಾಗೂ ಲಾಭಗಳು ಸುಧಾರಿಸುತ್ತವೆ. ತಂದೆ ಹಾಗೂ ಆಪ್ತೇಷ್ಟರಿಂದ ಮಾನಿಟರಿ ಲಾಭಗಳನ್ನೂ ಪಡೆಯುತ್ತೀರಿ.
 
 
 
ಮಿಥುನ
ನೀವು ಆರೋಗ್ಯದ ಬಗ್ಗೆ ತುಂಬಾ ಚಿಂತಿಸಬೇಕಿಲ್ಲ. ಆದಾಗ್ಯೂ, ಗ್ಯಾಸ್‌, ಅಜೀರ್ಣ ಇತ್ಯಾದಿ ತಪ್ಪಾದ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅವುಗಳನ್ನು ತುಂಬಾ ಲಘುವಾಗಿ ಪರಿಗಣಿಸಿದರೆ, ಇದು ನಂತರದಲ್ಲಿ ನಿಮಗೆ ಗಂಭೀರ ಸಮಸ್ಯೆಯಾಗಿ ಕಾಡಬಹುದು. ಈ ವರ್ಷದಲ್ಲಿ ನಿಮ್ಮ ಆಹಾರ ಸೇವನೆ ಹವ್ಯಾಸವನ್ನು ನಿಯಂತ್ರಿಸಲು ಪ್ರಯತ್ನಿಸಿ. ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಯು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಆದಾಗ್ಯೂ, ಈ ಬಗ್ಗೆ ನೀವು ತುಂಬಾ ಚಿಂತೆ ಪಡಬೇಕಿಲ್ಲ.
 
 
ಕರ್ಕಾಟಕ
ಈ ಮಾಸ ನಿಮ್ಮ ನಿರೀಕ್ಷೆಗಳು ಆಸೆಗಳಾಗಿ ಪರಿವರ್ತನೆಯಾಗುತ್ತವೆ. ಇದರಿಂದ, ಧೈರ್ಯದಿಂದ ಮುನ್ನಡೆಯಿರಿ. ದೇವರು, ಆಪ್ತರು ಮತ್ತು ಸುಶಿಕ್ಷಿತರ ಬಗ್ಗೆ ನಿಮ್ಮ ಭಕ್ತಿ ಎಚ್ಚೆತ್ತುಕೊಳ್ಳುತ್ತದೆ ಮತ್ತು ನಿಮ್ಮ ದಾರಿಯಲ್ಲಿನ ಎಲ್ಲ ಸಮಸ್ಯೆಗಳೂ ನಾಶವಾಗುತ್ತವೆ. ಲಾಟರಿ ಮತ್ತು ಗ್ಯಾಂಬ್ಲಿಂಗ್‌ನಿಂದ ನೀವು ದೂರವಿರುವುದು ಉತ್ತಮ. ವ್ಯಾಪಾರ ಹೂಡಿಕೆಗಳಿಂದ ಲಾಭ ಪಡೆಯುತ್ತೀರಿ.
 
 
ಸಿಂಹ
ಈ ತಿಂಗಳು ಹೊಸ ವಾಹನ ಅಥವಾ ಆಸ್ತಿಯ ಮೇಲೂ ನೀವು ಹೂಡಿಕೆ ಮಾಡಬಹುದು. ನಿಮ್ಮ ಪ್ರೇಮ ಸಂಬಂಧದಲ್ಲಿ ತುಂಬಾ ಎಚ್ಚರಿಕೆಯಿಂದಿರಬೇಕು. ಸುಮ್ಮನೇ ನಿಮ್ಮ ಸಂಗಾತಿಯ ಮೇಲೆ ಅನುಮಾನ ವ್ಯಕ್ತಪಡಿಸುವುದನ್ನು ದೂರವಿಡಿ. ವಿದ್ಯಾರ್ಥಿಗಳು ಸ್ವಲ್ಪ ಕಠಿಣ ಪರಿಶ್ರಮ ವಹಿಸಬೇಕಾದೀತು. ಕೆಲಸದ ಸ್ಥಳದಲ್ಲಿ ನಿಮ್ಮ ಮೇಲೆ ಕೆಲಸ ಒತ್ತಡ ಹೆಚ್ಚಬಹುದು. ಇಂತಹ ಸನ್ನಿವೇಶದಲ್ಲಿ, ನೀವು ಸಹನೆಯಿಂದ ವರ್ತಿಸಬೇಕು. ವರ್ಷದ ಎರಡನೇ ಭಾಗದಲ್ಲಿ, ನಿಮ್ಮ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ. ನೀವು ಗೌರವ ಹಾಗೂ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಪಡೆಯಬಹುದು. ನಿಮ್ಮ ವರ್ತನೆಯಲ್ಲಿನ ಸ್ವಲ್ಪ ಬದಲಾವಣೆಯು ನಿಮ್ಮ ಲಾಭಗಳನ್ನು ಹೆಚ್ಚಿಸಬಹುದು.
 
 
ಕನ್ಯಾ
ಈ ಮಾಸ ಹಲವು ಹೊಸ ಸಂಬಂಧಗಳು ರೂಪುಗೊಳ್ಳುತ್ತವೆ ಮತ್ತು ಹೊಸ ಸುದ್ದಿ ನಿಮ್ಮ ಒತ್ತಡವನ್ನು ನಿವಾರಿಸುತ್ತದೆ. ಆದಾಯದ ಹೊಸ ಮೂಲಗಳು ಸಿಗುತ್ತದೆ. ನಿಮ್ಮ ಆಸಕ್ತಿಯು ಹೊಸ ವಿಚಾರಗಳಿಗೆ ಹರಿಯುತ್ತದೆ. ದೀರ್ಘ ಪ್ರಯಾಣವನ್ನು ದೂರವಿಡಿ. ನಿಮ್ಮ ಪ್ರೀತಿಪಾತ್ರರರು ನಿಮ್ಮನ್ನು ತುಂಬಾ ಬೆಂಬಲಿಸುತ್ತಾರೆ. ನಿಮ್ಮ ಕೆಲಸವು ಬೆಳವಣಿಗೆಯ ಅವಕಾಶವನ್ನು ಪಡೆಯುತ್ತದೆ. ಶಾಂತಿ ಮತ್ತು ಸೌಹಾರ್ದತೆ ನಿಮ್ಮ ಕುಟುಂಬದಲ್ಲಿ ನೆಲೆಸುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಯಶಸ್ಸಿದೆ.
 
 
ತುಲಾ
ಈ ಮಾಸ ಹೊಸ ಕೆಲಸಗಳಿಗೆ ಯೋಜನೆ ಮಾಡುತ್ತೀರಿ, ಇದು ಯಶಸ್ವಿಯಾಗುತ್ತದೆ. ಆದಾಯಕ್ಕೆ ಯಾವುದೇ ಆಡಚಣೆ ಇರದು. ವಿನಾಕಾರಣ ಜಗಳ-ಕದನದಲ್ಲಿ ಪಾಲ್ಗೊಳ್ಳುವಿರಿ. ವಿವಾಹ ಮುಂದೂಡಲ್ಪಡುತ್ತದೆ. ಸರ್ಕಾರಿ ನೌಕರರಿಗೆ ಶುಭ. ಹೊಸದಾಗಿ ಯಾವುದಕ್ಕೂ ಹಣ ಹೂಡದಿರಿ. ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆತ್ಮಸ್ಥೈರ್ಯ ಮತ್ತು ಸಾಹಸದ ಗುಣ ನಿಮ್ಮಲ್ಲಿ ವಿಶೇಷವಾಗಿರುತ್ತದೆ.
 
 
ವೃಶ್ಚಿಕ
ಈ ಮಾಸ ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಉತ್ತಮ ಫಲಿತಾಂಶ ಸಿಗುತ್ತವೆ. ನಿಮ್ಮ ವ್ಯಾಪಾರದಲ್ಲಿ ಮಾರ್ಕೆಟಿಂಗ್‌ ಕೌಶಲಗಳಿಂದ ನೀವು ಹೆಚ್ಚು ಲಾಭ ಪಡೆಯುತ್ತೀರಿ. ಶತ್ರುಗಳೊಂದಿಗೆ ಎಚ್ಚರವಾಗಿರಿ ಮತ್ತು ಯೋಚಿಸಿ ವರ್ತಿಸಿ. ನಂಬಿಕಸ್ಥ ವ್ಯಕ್ತಿಗಳೇ ನಿಮಗೆ ಮೋಸ ಮಾಡಬಹುದು. ದೀರ್ಘ ಪ್ರಯಾಣ ನಿಮಗೆ ಲಾಭ ತಂದುಕೊಡಬಹುದು. ಸ್ವಂತ ವಾಹನ ಕೊಳ್ಳುವಿರಿ. ನಿಮ್ಮ ಮಕ್ಕಳಿಂದ ಅನಿರೀಕ್ಷಿತ ಸಹಾಯ ದೊರೆಯುತ್ತದೆ.
 
ಧನು
ಈ ತಿಂಗಳು ಈ ರಾಶಿಯವರು ಸ್ವಲ್ಪ ಆರೋಗ್ಯ ಸಮಸ್ಯೆಗಳನ್ನು ಹೊಂದಬಹುದು. ನಿಮ್ಮ ಪ್ರೇಮ ಜೀವನದಲ್ಲಿ ಉತ್ತಮ. ಸಮತೋಲನ ಕಾಯ್ದುಕೊಳ್ಳಿ. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ. ವಿದ್ಯಾರ್ಥಿಗಳಿಗೆ ಈ ತಿಂಗಳೂ ಉತ್ತಮವಾಗಿರುತ್ತದೆ ಮತ್ತು ಅಧ್ಯಯನ, ಬ್ಯಾಂಕಿಂಗ್‌ ಮತ್ತು ನಿರ್ವಹಣೆ ವಿಚಾರದಲ್ಲಿ ಉತ್ತಮವಾಗಿದೆ. ಗುರಿ ಸಾಧಿಸುವ ನಿಮ್ಮ ಪ್ರಯತ್ನವನ್ನು ನಿಲ್ಲಿಸಬೇಡಿ. ನಿಮ್ಮ ಹಿರಿಯ ಸಹೋದರ ಜತೆಗಿನ ವ್ಯವಹಾರ ಲಾಭದಾಯವಾಗಿರುತ್ತದೆ. ಮನೆ, ವಾಹನ ಕೊಳ್ಳುವಿರಿ.
 
 
 
ಮಕರ
ಈ ಮಾಸ ನಿರುದ್ಯೋಗಿಗಳು ಕೆಲಸವನ್ನು ಸಾಕಷ್ಟು ಅವಕಾಶವನ್ನು ಪಡೆಯುತ್ತೀರಿ. ಮಾಧ್ಯಮ ಅಥವಾ ಯಾವುದೇ ಕಲಾ ಕ್ಷೇತ್ರದಲ್ಲಿರುವ ಜನರು ಅನುಕೂಲ ಪಡೆಯುತ್ತಾರೆ. ಉದ್ಯೋಗದಲ್ಲಿ ಸಮಸ್ಯೆ ಇರುವುದಿಲ್ಲ. ತಿಂಗಳ ಅಂತ್ಯದಲ್ಲಿ ಬಡ್ತಿ ಪಡೆಯುತ್ತೀರಿ. ಕುಟುಂಬದ ವಿಚಾರದಲ್ಲಿ ನೀವು ಒತ್ತಡ ಅನುಭವಿಸುತ್ತೀರಿ. ನಿಮ್ಮ ಜೀವನ ಸಂಗಾತಿಗಾಗಿ ಸ್ವಲ್ಪ ಸಮಯ ಮೀಸಲಿಡಿ ಮತ್ತು ಒಟ್ಟಾಗಿ ಚರ್ಚಿಸಿ ಸಮಸ್ಯೆ ಸರಿಪಡಿಸಿ. ಶತ್ರುಗಳು ನಿಮ್ಮ ಬೆಂಬಲದಿಂದ ಲಾಭ ಪಡೆಯುತ್ತಾರೆ. ನಿಮ್ಮ ಬಯಕೆಗಳು ಪುಣ್ಯ ಹಾಗೂ ಧಾರ್ಮಿಕ ಕಾರ್ಯಗಳಿಂದ ಹೆಚ್ಚಾಗುತ್ತವೆ. ಸಮಾಜ, ಕುಟುಂಬ ಮತ್ತು ನಿಮ್ಮ ಕೌಶಲ್ಯಗಳಿಗೆ ವ್ಯವಹಾರದಿಂದ ಮೆಚ್ಚಿಗೆ ಪಡೆಯುತ್ತವೆ.
 
ಕುಂಭ
ಈ ತಿಂಗಳು ನೀವು ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಬೇಕು. ವ್ಯವಹಾರ ಪಾಲುದಾರಿಕೆಯಲ್ಲಿ ಒಳಗೊಳ್ಳುವ ಮೊದಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿ. ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸಬಹುದು. ಸಂತಾನ ಲಾಭವಿದೆ. ವಿವಾಹ ಯೋಗವಿದೆ. ಅನಿರೀಕ್ಷಿತ ಧನ ಲಾಭವಿದೆ. ಸಾಲದ ವ್ಯವಹಾರ ಮಾಡದಿರಿ. ಈ ತಿಂಗಳು ನಿಮಗೆ ನರದೌರ್ಬಲ್ಯ ಕಾಡಬಹುದು.
 
ಮೀನ
ಈ ತಿಂಗಳು ಆದಾಯ ಉತ್ತಮವಾಗಿರುತ್ತದೆ. ಪ್ರೇಮ ಸಂಬಂಧದಲ್ಲಿ ಯಶಸ್ಸಿನ ಪ್ರಮಾಣ ಕಡಿಮೆಯಿದೆ. ಉತ್ತಮ ತಂತ್ರಗಾರಿಕೆ ಮತ್ತು ಆರೋಗ್ಯಕರ ಚರ್ಚೆ ಎಲ್ಲವನ್ನೂ ಪರಿಹರಿಸುತ್ತದೆ ಎಂದು ನೀವು ಅರ್ಥೈಸಿಕೊಳ್ಳಬೇಕು. ಅವಿವಾಹಿತರು ಕಾಯಬೇಕಾದೀತು, ಆದರೆ ಉತ್ತಮ ಅವಕಾಶಗಳು ಸರಿಯಾದ ಸಮಯಕ್ಕೆ ಲಭ್ಯವಾದೀತು. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಮಾಡಬೇಕು. ಆರೋಗ್ಯದ ಕಡೆ ಗಮನವಿರಲಿ. ಲೋಹದ ವ್ಯವಹಾರದಲ್ಲಿ ನಷ್ಟವಿದೆ.

LEAVE A REPLY

Please enter your comment!
Please enter your name here