2016-17ರ ವಾರ್ಷಿಕ ಸಭೆ ಮತ್ತು ಹೊಸ ಪದಾಧಿಕಾರಿಗಳ ಆಯ್ಕೆ

0
168

ಮ0ಗಳೂರು ಪ್ರತಿನಿಧಿ ವರದಿ
ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿಯ ವಾಣಿಜ್ಯಶಾಸ್ತ್ರ ವಿಭಾಗದ ಹಳೆ ವಿದ್ಯಾರ್ಥಿ ಸಂಘದ ಮಹಾ ಸಭೆಯು ಇತ್ತೀಚೆಗೆ ವಾಣಿಜ್ಯಶಾಸ್ತ್ರ ಸಭಾಭವನದಲ್ಲಿ ಜರುಗಿತು.
 
 
 
ಕಾರ್ಯಕ್ರಮದಲ್ಲಿ ಪ್ರಸ್ತುತ ಕೆ.ಎ.ಎಸ್. ಅಧಿಕಾರಿಯಾಗಿ ಕರ್ನಾಟಕ ಸರಕಾರದ ಮೀನುಗಾರಿಕಾ ಹಾಗೂ ಯುವಜನ ಖಾತೆ ಸಚಿವರಾದ ಪ್ರಮೋದ್ ಮಧ್ವರಾಜ್ ಅವರ ಕಾರ್ಯದರ್ಶಿ ಹಾಗೂ ಈ ಹಿಂದೆ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದ ಡಾ. ವಿಜಯ ಪ್ರಕಾಶ್‍ರವರು ಮಾತನಾಡಿ ಹಳೆ ವಿದ್ಯಾರ್ಥಿ ಸಂಘದ ಮಹತ್ವ ಹಾಗೂ ಅವರಿಂದ ಪ್ರಸ್ತುತ ವಿದ್ಯಾರ್ಜನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಆಗುವ ಅನುಕೂಲ ಮತ್ತು ವಿವಿಧ ವರ್ಷಗಳಲ್ಲಿ ಎಂ.ಕಾಂ. ವಿಭಾಗದಲ್ಲಿ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿಗಳ ಬಗ್ಗೆ ಸವಿನೆನಪುಗಳ ಹಿನ್ನೋಟ ನೀಡಿದರು.
 
 
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯಶಾಸ್ತ್ರ ನಿಕಾಯದ ಅಧ್ಯಕ್ಷರೂ, ವಿಭಾಗ ಮುಖ್ಯಸ್ಥರೂ ಆದ ಮುನಿರಾಜು ವೈ ಅವರು ವಹಿಸಿ, ವಿಭಾಗದ ಮುಂದಿನ ಯೋಜನೆಗಳನ್ನು, ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಿ, ಹಳೆ ವಿದ್ಯಾರ್ಥಿಗಳು ವಿಭಾಗದ ಅಭಿವೃದ್ಧಿ ಕಾರ್ಯದಲ್ಲಿ ಕೈಜೊಡಿಸಲು ಮನವಿಮಾಡಿಕೊಂಡರು.
 
 
 
ಕಾರ್ಯಕ್ರಮದಲ್ಲಿ ವಿಭಾಗದ ಹಿರಿಯ ಪ್ರೋ. ಡಾ. ರಘುರಾಮ ಅವರು ಉಪಸ್ಥಿತರಿದ್ದು, ಹಳೆ ವಿದ್ಯಾರ್ಥಿಗಳು ಅವರ ಸೇವೆಯನ್ನು ಕೊಂಡಾಡಿದರು. ಅಮುಕ್ತ್‍ನ ಅಧ್ಯಕ್ಷರಾದ ಉಮ್ಮಪ್ಪ ಪೂಜಾರಿಯವರು ಉಪಸ್ಥಿತರಿದ್ದು, ವಿಭಾಗದ ಶೈಕ್ಷಣಿಕ/ಶೈಕ್ಷಣಿಕೇತರ ಕಾರ್ಯಗಳಲ್ಲಿ ಸಕ್ರಿಯವಾಗಿ ಹಳೆವಿದ್ಯಾರ್ಥಿಗಳು ತೊಡಗಿಕೊಳ್ಳುವಂತೆ ಕರೆನೀಡಿದರು. ನಗರದ ಹಿರಿಯ ವಕೀಲರೂ, ವಿಭಾಗದ ಹಳೆ ವಿದ್ಯಾರ್ಥಿಗಳೂ ಆದ ಎಂ. ಮಧುಸೂದನ್ ಭಟ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳ ಆಯ್ಕೆಗೆ ಚಾಲನೆ ನೀಡಿದರು.
 
 
ಸಭೆಯಲ್ಲಿ ರಾಜಶೇಖರ್ ಹೆಬ್ಬಾರ್ ಸಿ., ಪ್ರಾಂಶುಪಾಲರು, ಸಪ್ರದಕಾಲೇಜು ಮಂಗಳೂರು ರಥಬೀದಿ ಇವರನ್ನು ಅಧ್ಯಕ್ಷರನ್ನಾಗಿಯೂ, ಅನುಸೂಯ ರೈ, ವಿ.ವಿ. ಕಾಲೇಜು ಮಂಗಳೂರು ಇವರನ್ನು ಉಪಾಧ್ಯಕ್ಷರನ್ನಾಗಿಯೂ, ಮಂಗಳಗಂಗೋತ್ರಿ ವಾಣಿಜ್ಯಶಾಸ್ತ್ರ ವಿಭಾಗದ ಡಾ. ಪರಮೇಶ್ವರ್ ಅವರನ್ನು ಕಾರ್ಯದರ್ಶಿಯಾಗಿಯೂ, ಎನ್‍ಎಸ್‍ಎಎಂ, ನಿಟ್ಟೆ ಅಮಿತ, ಅವರನ್ನು ಜತೆ ಕಾರ್ಯದರ್ಶಿಯಾಗಿಯೂ, ಪ್ರಾಂಶುಪಾಲರು, ಕಣಚೂರು ವ್ಯವಹಾರಾಧ್ಯಯನ ಮತ್ತು ವಿಜ್ಞಾನ ಕಾಲೇಜು ದೇರಳಕಟ್ಟೆ ಇಕ್ಬಾಲ್ ಅಹ್ಮದ್ ಯು.ಟಿ., ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here