200 ಅಂಕಗಳ ಕುಸಿತ

0
176

ರಾಷ್ಟ್ರೀಯ ಪ್ರತಿನಿಧಿ ವರದಿ
ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 200 ಅಂಕಗಳ ಕುಸಿತವನ್ನು ಕಂಡಿತು.
 
 
 
ನಿನ್ನೆಯ ಕುಸಿತವನ್ನು ಇಂದು ಮುಂದುವರಿಸಿದ ಸೆನ್ಸೆಕ್ಸ್‌ ಇಂದು ಆರಂಭಿಕ ವಹಿವಾಟಿನಲ್ಲೇ ಮುಗ್ಗರಿಸಿ 199.97 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 26,539.95 ಅಂಕಗಳ ಮಟ್ಟದಲ್ಲಿ ಆರಂಭಿಸಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 62.15 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 8,130.75 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಆರಂಭಿಸಿತು.
 
 
 
ಬೆಳಗ್ಗೆ 11.10ರ ಹೊತ್ತಿಗೆ ಸೆನ್ಸೆಕ್ಸ್‌ 222.43 ಅಂಕಗಳ ನಷ್ಟದೊಂದಿಗೆ 26,337.49 ಅಂಕಗಳ ಮಟ್ಟದಲ್ಲೂ, ನಿಫ್ಟಿ 72.85 ಅಂಕಗಳ ನಷ್ಟದೊಂದಿಗೆ 8,120.05 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

LEAVE A REPLY

Please enter your comment!
Please enter your name here