20ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್‌ ಘೋಷಣೆ

0
666

೨೦೨೦ಕ್ಕೆ ವಿಶೇಷ ೨೦ ಲಕ್ಷ ಕೋಟಿ ಪ್ಯಾಕೇಜ್

ಇಡೀ ರಾಷ್ಟ್ರವೇ ಎದುರು ನೋಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವದ ಮಾತು ಆರಂಭವಾಯಿತು. ದೇಶವನ್ನುದ್ದೇಶಿಸಿ ಪ್ರಧಾನಿಗಳು ಇದೀಗ ಮತ್ತೊಮ್ಮೆ ಮಾತನಾಡುತ್ತಿದ್ದಾರೆ. ಕೊರೊನಾ ಹಾವಳಿ ಆರಂಭಗೊಂಡು ೪ತಿಂಗಳುಗಳಾಗಿವೆ. ಒಂದು ವೈರಸ್‌ ಇಡೀ ವಿಶ್ವವನ್ನು ನಲುಗಿಸುತ್ತಿದೆ. ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಸಾಂತ್ವನ ಹೇಳುತ್ತೇನೆ.ವೈದ್ಯಕೀಯ ಜಗತ್ತು ಕೊರೊನಾ ವಿರುದ್ಧ ಸಮರ ಸಾರಿದೆ ಎಂದು ಪ್ರಧಾನಿ ಮೋದಿ ಹೇಳಿದರು.

೨೧ನೇ ಶತಮಾನ ಭಾರತದ ಶತಮಾನ. ಇದು ಕೇವಲ ಕನಸಲ್ಲ…ಇದು ಜವಾಬ್ದಾರಿ. ವಿಶ್ವದ ಇಂದಿನ ಸ್ಥಿತಿ ನಮಗೆ ಪಾಠ ಕಲಿಸುತ್ತಿದೆ. ಸ್ವಾವಲಂಬೀ ಭಾರತ ಎಂಬುದೇ ನಮಗೆ ಪಾಠ ಎಂದು ಹೇಳಿದ್ದಾರೆ ಮೋದಿ.

ಒಂದು ರಾಷ್ಟ್ರವಾಗಿ ಪ್ರಮುಖ ಘಟ್ಟಕ್ಕೆ ಬಂದು ನಿಂತಿದ್ದೇವೆ. ಸಂಪೂರ್ಣ ಎಚ್ಚರಿಕೆಯಿಂದ ನಾವೀಗ ಕಾರ್ಯ ನಿರ್ವಹಿಸಬೇಕಾಗಿದೆ. ಭಾರತದಲ್ಲಿ ಈಗ ಎರಡು ಲಕ್ಷ ಪಿ.ಪಿ.ಇ ಕಿಟ್‌ ತಯಾರಾಗುತ್ತಿದೆ.

ಸಂಕಟವನ್ನು ಭಾರತ ಅವಕಾಶವನ್ನಾಗಿ ಬದಲಾಯಿಸಿಕೊಂಡಿದೆ. ಭಾರತದ ಆತ್ಮ ವಸುದೈವ ಕುಟುಂಬಕಂ ಎಂಬುದು.

Advertisement

ಇಡೀ ಜಗತ್ತಿಗೆ ಒಳಿತಾಗಲಿ ಎಂಬುದು ಭಾರತದ ಚಿಂತನೆ, ಇದು ಭಾರತದ ಸಂಸ್ಕೃತಿ ಎಂದು ವ್ಯಾಖ್ಯಾನಿಸಿದರು. ಭೂಮಿಯನ್ನು ತಾಯಿ ಎಂದು ಗೌರವಿಸುವ ಸಂಪ್ರದಾಯ ನಮ್ಮ ದೇಶದ್ದು. ಇಡೀ ಭಾರತದ ಪ್ರಭಾವ ಇಂದು ವಿಶ್ವದಾದ್ಯಂತ ಪಸರಿಸುತ್ತಿದೆ. ಭಾರತದಲ್ಲಿ ಆರಂಭಗೊಂಡ ಒಂದೊಂದು ಅಭಿಯಾನ ವಿಶ್ವದ ನಾನಾ ದೇಶಗಳಲ್ಲಿ ಅನುಷ್ಠಾನವಾಗುತ್ತಿದೆ. ಇವೆಲ್ಲವೂ ಜಾಗತಿಕ ಪ್ರಭಾವ ಬೀರುವಂತದ್ದಾಗಿದೆ.

ನಮ್ಮ ಭಾರತದ ಔಷಧಗಳು ಬಹು ನಿರೀಕ್ಷೆಯೊಂದಿಗೆ ಜಗತ್ತಿಗೆ ತಲುಪುತ್ತಿದೆ. ದೇಶದಿಂದ ವಿಶ್ವಕ್ಕೆ ದೊಡ್ಡ ಕೊಡುಗೆ ಲಭಿಸಲಿದೆ. ಭಾರತದ ಮೇಲೆ ಜಗತ್ತಿನ ವಿಶ್ವಾಸ ಹೆಚ್ಚಿದೆ.

ಭಾರತದಲ್ಲಿ ಸಾಕಷ್ಟು ಉತ್ತಮ ಪ್ರತಿಭೆಗಳಿವೆ. ಅತ್ಯುತ್ತಮ ವಸ್ತುಗಳನ್ನು ನಾವು ತಯಾರಿಸುತ್ತಿದ್ದೇವೆ. ಪೂರೈಕೆಯ ಮಾರ್ಗವನ್ನು ಸುಧಾರಿಸುವ ಕಾರ್ಯವಾಗಿದೆ. ಭಾರತದ ಸಂಕಲ್ಪ ಶಕ್ತಿ ಅತ್ಯುತ್ತಮವಾಗಿದೆ. ಭೂಕಂಪದಿಂದ ನಲುಗಿ ಹೋದ ಕಛ್‌ ಮತ್ತೆ ಎದ್ದು ನಿಂತದ್ದು ದೊಡ್ಡ ಸಾಧನೆ. ಭಾರತದ ಸಂಕಲ್ಪವೇ ಇದಕ್ಕೆಲ್ಲ ಪ್ರಮುಖ ಕಾರಣವಾಯಿತು. ೫ ಸ್ತಂಭಗಳ ಮೇಲೆ ಸ್ವಾವಲಂಬನೆಯ ಹಾದಿಯಿದೆ. ದೇಶದ ಮೊದಲ ಆಧಾರ ಸ್ತಂಭ ಆರ್ಥಿಕತೆ.ನಿಧಾನಗತಿ ಆರ್ಥಿಕತೆಯಿಂದ ಪ್ರಗತಿ ಅಸಾಧ್ಯ. ೨ನೆಯವದು ಮೂಲಭೂತ ವ್ಯವಸ್ಥೆ, ತಂತ್ರಜ್ಞಾನ, ಜನಸಂಖ್ಯೆ , ಬೇಡಿಕೆ ಇವೆಲ್ಲವೂ ಪ್ರಮುಖವಾದವುಗಳು. ಸ್ವಾವಲಂಬೀ ಭಾರತ ಅಭಿಯಾನಕ್ಕೆ ಆರ್ಥಿಕ ಪ್ಯಾಕೇಜ್‌ ಘೋಷಿಸುವೆ ಎಂದು ಮೋದಿ ಹೇಳಿದರು.

೨೦ಲಕ್ಷ ಕೋಟಿಯ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಣೆ. ಸಣ್ಣ ಅತಿಸಣ್ಣ ಗುಡಿ ಕೈಗಾರಿಕೆಗಳಿಗೆ ಸಹಕಾರ . ಕಾರ್ಮಿಕ ರೈತರಿಗಾಗಿ , ತೆರಿಗೆ ಕಟ್ಟುವವರಿಗಾಗಿಯೇ ಪ್ಯಾಕೇಜ್‌ ಘೋಷಣೆ ಮಾಡಿರುವುದಾಗಿ ಹೇಳಿದ್ದಾರೆ. ಜಿ.ಡಿ.ಪಿಯ ಶೇ ೧೦ರಷ್ಟು ಪ್ಯಾಕೇಜ್‌ ಘೋಷಣೆ ಮಾಡಿರುವುದಾಗಿ ಹೇಳಿದರು.

ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ಬಗ್ಗೆ ಮಾತನಾಡಿದ ಮೋದಿಯವರು ದೇಶೀಯ ವಸ್ತುಗಳನ್ನು ಖರೀದಿಸಿ, ವಿಶ್ವ ದರ್ಜೆಗೆ ಏರಿಸುವಂತೆ ಕರೆನೀಡಿದರು.

ಲಾಕ್‌ ಡೌನ್‌ ಪಕ್ಕಾ: ಲಾಕ್‌ ಡೌನ್ ೪.೦ ಪಕ್ಕಾ ಎಂದ ಮೋದಿಯವರು ಹೊಸ ನಿಯಮಗಳೊಂದಿಗೆ ಅದು ಜಾರಿಗೆ ಬರಲಿದೆ ಎಂದರು. ಮೇ ೧೮ರಿಂದ ಲಾಕ್‌ ಡೌನ್.‌ ೪.೦ ಆರಂಭವಾಗಲಿದೆ. ರಾಜ್ಯಗಳ ಸಲಹೆ ಪಡೆದು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು. ಪ್ರತೀ ರಾಜ್ಯಕ್ಕೂ ಭಿನ್ನವಾಗಿ, ಆಯಾ ರಾಜ್ಯಗಳಿಗೆ ಅನುಗುಣವಾಗಿ ಪ್ರತ್ಯೇಕ ಮಾರ್ಗ ಸೂಚಿಸಯೊಂದಿಗೆ ಇದು ಜಾರಿ ಗೊಳ್ಳಲಿದೆ ಎಂದು ಪ್ರಧಾಣಿ ಹೇಳಿದರು.

LEAVE A REPLY

Please enter your comment!
Please enter your name here