ಪ್ರಮುಖ ಸುದ್ದಿರಾಜ್ಯವಾರ್ತೆ

2.5ಕೋಟಿ ರೂ.ಜಪ್ತಿ

ಬೆಂಗಳೂರು ಪ್ರತಿನಿಧಿ ವರದಿ
ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ 2.5 ಕೋಟಿ ರೂ. ಜಪ್ತಿ ಮಾಡಿದ ಘಟನೆ ವಿಧಾನಸೌಧ ಕೆಂಗಲ್ ಹನುಮಂತಯ್ಯ ಗೇಟ್ ಬಳಿ ನಡೆದಿದೆ.
ವೋಕ್ಸ್ ವ್ಯಾಗನ್ ಕಾರಿನಲ್ಲಿ ಅನುಮಾನಾಸ್ಪದವಾಗಿ ಹಣವನ್ನು ಸಾಗಾಟ ಮಾಡಲಾಗುತ್ತಿತ್ತು. ಕಾರು ಮಾಲೀಕ ಸಿದ್ಧಾರ್ಥ್ ಎಂಬುವವನನ್ನು ವಶಕ್ಕೆ ಪಡೆಯಲಾಗಿದ್ದು, ಕಾರಿನಲ್ಲಿ ಹಣವನ್ನು ಜಪ್ತಿ ಮಾಡಲಾಗಿದೆ.
 
 
KA 04 MM 9018 ಸಂಖ್ಯೆಯ ಕಾರಿನಲ್ಲಿ ಹಣ ಸಾಗಾಟ ಮಾಡಲಾಗುತ್ತಿತ್ತು. ವಿಧಾನಸೌಧದ ಡಿಸಿಪಿ ಕಚೇರಿಯಲ್ಲಿ ಸಿದ್ಧಾರ್ಥ್ ನನ್ನು ವಿಚಾರಣೆ ನಡೆಸಲಾಗುತ್ತಿದೆ.
 
ಟೆಂಡರ್ ನಿಮಿತ್ತ ಈ ಹಣವನ್ನು ಸಚಿವರೊಬ್ಬರಿಗೆ ನೀಡಲು ವಿಧಾನಸೌಧಕ್ಕೆ ತರಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here