2ನೇ ಮಹಾಯುದ್ಧದ ಜಲಾಂತರ್ಗಾಮಿ ಪತ್ತೆ

0
306

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
73 ವರ್ಷಗಳ ಬಳಿ 2ನೇ ಮಹಾ ಯುದ್ಧದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಜಲಾಂತರ್ಗಾಮಿಯೊಂದು ಪತ್ತೆಯಾಗಿದೆ. ಬ್ರಿಟಿಷ್ ಎಚ್ ಎಂ ಎಸ್ 311 ಜಲಾಂತರ್ಗಾಮಿ 71 ಮೃತದೇಹಗಳೊಂದಿಗೆ ಇಟೆಲಿಯ ಕಡಲ ತೀರದಲ್ಲಿ ಪತ್ತೆಯಾಗಿದೆ.
 
 
 
ಈ ನೌಕೆಯು ಮುಳುಗಾಟ ತಂಡದಿಂದ ಇಟಲಿಯ ತವೊಲಾರ ದ್ವೀಪದ ಸಾರ್ಡಿನಿಯಾ ಬಳಿ 100 ಅಡಿ ಆಳದಲ್ಲಿ ಜಲಾಂತರ್ಗಾಮಿಯ 1,290 ಟನ್‌ ಅವಶೇಷಗಳು ದೊರೆತಿವೆ. ಸ್ಫೋಟದಿಂದ ಚಿಕ್ಕ ಪುಟ್ಟ ಹಾನಿಗಳಾಗಿವೆ. ಆದರೂ ಸಬ್‌ಮರೀನ್‌ ಉತ್ತಮ ಸ್ಥಿತಿಯಲ್ಲಿ ಇದೆ ಎಂದು ಹೇಳಲಾಗಿದೆ.
 
 
 
ಈ ನೌಕೆ ರಾಯಲ್ ನೌಕಾದಳಕ್ಕೆ ಸೇರಿದ ಹಡಗೇ ಎಂಬುದರ ಬಗ್ಗೆ ದಾಖಲೆಗಳನ್ನು ಪರಿಶೀಲಿಸುತ್ತಿರುವುದಾಗಿ ನೌಕಾದಳದ ವಕ್ತಾರರೊಬ್ಬರು ಹೇಳಿದ್ದಾರೆ.
 
 
 
ಮಹಾಯುದ್ಧದ ವೇಳೆ ಡಿಸೆಂಬರ್ 28, 1942ರಂದು ಎರಡು ಇಟಾಲಿಯನ್ ಯುದ್ಧನೌಕೆಗಳನ್ನು ನಾಶ ಮಾಡುವ ಯೋಜನೆ ರೂಪುಗೊಂಡಿತ್ತು. ನಂತರ ಈ ನೌಕೆ ಚಿಕ್ಕ ಕುರುಹನ್ನೂ ಉಳಿಸದೆ ನಾಪತ್ತೆಯಾಗಿತ್ತು. 1943 ಜ.2ರಂದು ಎಚ್ ಎಂ ಎಸ್ 311 ಜಲಾಂತರ್ಗಾಮಿ ನಾಪತ್ತೆಯಾಗಿತ್ತು ಎನ್ನಲಾಗಿದೆ.

LEAVE A REPLY

Please enter your comment!
Please enter your name here