1945ರ ಆಗಸ್ಟ್‌ 18ರಂದು ನೇತಾಜಿ ಸಾವು

0
457

ನಮ್ಮ ಪ್ರತಿನಿಧಿ ವರದಿ
ತೈವಾನ್‌ನಲ್ಲಿ 1945ರ ಆಗಸ್ಟ್‌ 18ರಂದು ನೇತಾಜಿ ಅವರಿದ್ದ ವಿಮಾನ ಅಪಘಾತಕ್ಕಿಡಾಯಿತು. ಅವರು ತೈಪೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಿಸದೇ ಅದೇ ದಿನ ಸಂಜೆ ಅಸುನೀಗಿದರು ಎಂಬ ಮಾಹಿತಿಯನ್ನು ನೇತಾಜಿ ದಾಖಲೆಗಳನ್ನು ಬಹಿರಂಗಪಡಿಸಲೆಂದೇ ಇರುವ ಬ್ರಿಟನ್‌ ಮೂಲದ Bosefiles.info ಎಂಬ ವೆಬ್‌ಸೈಟ್‌ ಹೇಳಿದೆ. ತನ್ಮೂಲಕ ನೇತಾಜಿ ಸಾವಿನ ಬಗೆಗೆ ಇರುವ ಹಲವಾರು ಚರ್ಚೆಗಳಿಗೆ ಮತ್ತೊಂದು ಮಹತ್ವದ ತಿರುವು ದೊರೆತಂತಾಗಿದೆ. “ದಿ| ಸುಭಾಷ್‌ ಚಂದ್ರ ಬೋಸ್‌ ಅವರ ಸಾವಿನ ಕಾರಣಗಳು ಮತ್ತು ಇತರ ವಿಷಯಗಳು’ ಹೆಸರಿನ ವರದಿಯನ್ನು ಬಹಿರಂಗಪಡಿಸಲಾಗಿದೆ. ವರದಿ ಜಪಾನೀ ಭಾಷೆಯಲ್ಲಿ 7 ಪುಟ ಹಾಗೂ ಅದರ ತರ್ಜುಮೆ ಆಂಗ್ಲಭಾಷೆಯಲ್ಲಿ 10ಪುಟಗಳಷ್ಟಿವೆ. ಜಪಾನ್ ಸರಕಾರ ಬಹಿರಂಗ ಪಡಿಸಿದ 60ವರ್ಷ ಹಳೆಯ ಸರಕಾರಿ ದಾಖಲೆ ಇದೀಗ ನೇತಾಜೀ ಸಾವಿನ ಪ್ರಕರಣದ ಮೇಲೆ ಮತ್ತೊಂದು ರೀತಿಯ ಬೆಳಕು ಚೆಲ್ಲುವಂತೆ ಮಾಡಿದೆ.
netaji _ subhas_chandra_bose
ನೇತಾಜಿ ಸಂಚರಿಸುತ್ತಿದ್ದ ವಿಮಾನ ಟೇಕಾಫ್ ಅದ ಕೆಲವೇ ಹೊತ್ತಲ್ಲಿ ನೆಲಕ್ಕಪಳಿಸಿತು. ಅಪಘಾತದಲ್ಲಿ ನೇತಾಜೀ ತೀವ್ರ ಗಾಯಗೊಂಡಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ತೈಪೇ ಸೇನಾ ಆಸ್ಪತ್ರೆಯ ನ್ಯಾನ್ಮನ್‌ ಶಾಖೆಗೆ ಅವರನ್ನು ದಾಖಲಿಸಲಾಯಿತು. ಸಂಜೆ 7 ಗಂಟೆಗೆ ಮೃತಪಟ್ಟಿದ್ದಾರೆ. ಆಗಸ್ಟ್‌ 22ರಂದು ತೈಪೇ ನಗರಪಾಲಿಕೆ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ದಾಖಲೆ ತಿಳಿಸಿದೆ.

LEAVE A REPLY

Please enter your comment!
Please enter your name here