19 ಮಾವೋವಾದಿಗಳ ಹತ್ಯೆ

0
218

ರಾಷ್ಟ್ರೀಯ ಪ್ರತಿನಿಧಿ ವರದಿ
ಆಂಧ್ರ ಪ್ರದೇಶ ಹಾಗೂ ಒಡಿಶಾ ಗಡಿ ಪ್ರದೇಶದಲ್ಲಿ ಭೀಕರ ಎನ್ ಕೌಂಟರ್ ನಡೆದಿದೆ. ಈಎನ್ ಕೌಂಟರ್ ನಲ್ಲಿ ಬರೊಬ್ಬರಿ 19 ಮಾವೋವಾದಿಗಳನ್ನು ಪೊಲೀಸರು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
 
 
ಒಡಿಶಾದ ಮಲ್ಕಗಿರಿಯಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಎವೋಬಿ ಬಳಿ ಮಾವೋವಾದಿ ಮುಖಂಡರು ಸಭೆ ನಡೆಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಆಂಧ್ರ ಪ್ರದೇಶದ ಗ್ರೇಹೌಂಡ್ಸ್ ಹಾಗೂ ಒಡಿಶಾದ ಎಸ್ ಒಟಿ ಪೊಲೀಸರ ತಂಡ ದಾಳಿ ನಡೆಸಿದೆ.
 
 
ಪೊಲೀಸರ ಆಗಮನವಾಗುತ್ತಿದ್ದಂತೆಯೇ ಪೊಲೀಸರತ್ತ ಮಾವೋವಾದಿಗಳು ಗುಂಡು ಹಾರಿಸಲು ಆರಂಭಿಸಿದ್ದು, ಪ್ರತಿದಾಳಿ ನಡೆಸಿದ ಪೊಲೀಸರು 19 ಮಂದಿ ಮಾವೋವಾದಿಗಳನ್ನು ಕೊಂದು ಹಾಕಿದ್ದಾರೆ. ಈ ವೇಳೆ ಇಬ್ಬರು ಪೊಲೀಸರಿಗೆ ಗುಂಡೇಟು ತಗುಲಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ದಾಳಿ ವೇಳೆ ಪೊಲೀಸರು ಮಾವೋವಾದಿಗಳ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಎಕೆ47, ಎಸ್ ಎಲ್ ಆರ್ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here