16 ಮಹತ್ವದ ಒಪ್ಪಂದಗಳಿಗೆ ಇಂಡೋ-ರಷ್ಯಾ ಸಹಿ

0
221

ರಾಷ್ಟ್ರೀಯ ಪ್ರತಿನಿಧಿ ವರದಿ
ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದೊಂದಿಗೆ ಸುಮಾರು 398 ಸಾವಿರ ಕೋಟಿ ರು.ಮೌಲ್ಯದ 16 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ..
 
ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶಿಕ್ಷಣ, ರಕ್ಷಣೆ ಸೇರಿದಂತೆ ಸುಮಾರು 16 ಮಹತ್ವದ ಒಪ್ಪಂದಗಳಿಗೆ ಪರಸ್ಪರ ಸಹಿಹಾಕಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಶಿಕ್ಷಣ ಕ್ಷೇತ್ರ, ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಭಾರತದಲ್ಲಿ ನೈಸರ್ಗಿಕ ಅನಿಲ ಉತ್ಪಾದನೆ ಕುರಿತ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಇದಲ್ಲದೆ ಕೂಡಂಕುಳಂ ಅಣುಸ್ಥಾವರ 2ನೇ ಘಟಕ ನಿರ್ಮಾಣ ಹಾಗೂ ಭಾರತದ ರೈಲ್ವೇ ಕ್ಷೇತ್ರದಲ್ಲಿ ರಷ್ಯಾ ಬಂಡವಾಳ ಹೂಡುವ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

LEAVE A REPLY

Please enter your comment!
Please enter your name here