15 ನಿಮಿಷದಲ್ಲೇ ಜಾಮೀನು

0
531

 
ಬೆಂಗಳೂರು ಪ್ರತಿನಿಧಿ ವರದಿ
 
ಸಂಚಾರಿ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಹಿನ್ನೆಲೆಯಲ್ಲಿ ನಟಿ ಮೈತ್ರಿಯಾ ಗೌಡ ಹಾಗೂ ಆಕೆಯ ಸಹೋದರಿ ಸೇರಿ ನಾಲ್ವರಿಗೆ ಮ್ಯಾಜಿಸ್ಟ್ರೇಟ್ ಶುಕ್ರವಾರ ಜೈಲು ಶಿಕ್ಷೆ ಪ್ರಕಟಿಸಿದೆ. ಆದರೆ ತೀರ್ಪು ಹೊರಬಿದ್ದ 15 ನಿಮಿಷದಲ್ಲಿಯೇ ನಟಿಗೆ ಜಾಮೀನು ಸಹ ದೊರಕಿದೆ.
 
 
2011ರಲ್ಲಿ ಕಾರು ಚಾಲನೆ ಮಾಡುತ್ತಿದ್ದ ವೇಳೆ ಮೊಬೈನ್ ನಲ್ಲಿ ಮಾತನಾಡುತ್ತಿದ್ದನ್ನು ಪ್ರಶ್ನಿಸಿದ್ದ ಬಸವೇಶ್ವರನಗರ ಸಂಚಾರ ಠಾಣೆ ಮುಖ್ಯಪೇದೆ ಶಿವಕುಮಾರ್ ಮೇಲೆ ಮೈತ್ರಿಯಾ ಗೌಡ ಹಾಗೂ ಆಕೆಯ ಸಂಬಂಧಿಗಳು ಹಲ್ಲೆ ನಡೆಸಿದ್ದರು. ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
 
 
ಹಲ್ಲೆ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್, ಮೈತ್ರಿಯಾ ಗೌಡಗೆ ಎರಡು ವರ್ಷ ಹಾಗೂ ಆಕೆಯ ಸಹೋದರಿ ಸುಪ್ರಿಯಾ, ಸಂಬಂಧಿಗಳಾದ ರೂಪಾ ಮತ್ತು ರೇಖಾಗೆ ತಲಾ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ ಜೈಲುವಾಸದಿಂದ ಮೈತ್ರಿಯಾ ಪಾರಾಗಿದ್ದಾರೆ.
 
 
ಈ ಹಿಂದೆ ಮೈತ್ರಿಯಾ ಗೌಡ,  ಕೇಂದ್ರ ಕಾನೂನು ಸಚಿವ ಸದಾನಂದ ಗೌಡರ ಪುತ್ರ ಕಾರ್ತಿಕ್ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಆರೋಪ ಮಾಡಿ ಸುದ್ದಿಯಲಿದ್ದರು.

LEAVE A REPLY

Please enter your comment!
Please enter your name here