ವಾರ್ತೆ

125ನೇ ಜಯಂತಿ ಸಮಾರಂಭ

ಉಡುಪಿ ಪ್ರತಿನಿಧಿ ವರದಿ
ಹೊಸಂಗಡಿಯ ಕೆಪಿಸಿ ಎನರ್ಜಿ ಕ್ಲಬ್ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ರವರ 125ನೇ ಜಯಂತಿಯನ್ನು ಕೆಪಿಸಿ ಮತ್ತು ಕೆಪಿಸಿ ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡಗಳ ನೌಕರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಚರಿಸಲಾಯಿತು.
 
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾರ್ಯನಿರ್ವಾಹಕ ನಿರ್ದೇಶಕರು(ಹೈಡಲ್) ರವರಾದ ಜಿ. ರತ್ಮಮ್ಮ ಜ್ಯೋತಿ ಬೆಳಗಿಸುವುದರೊಂದಿಗೆ ಸಮಾರಂಭವನ್ನು ಉದ್ಘಾಟಿಸಿ ಮಾಡನಾಡುತ್ತಾ, ಅಂಬೇಡ್ಕರ್ರವರು ಭಾರತ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರಿಗೆದೇಶದ ಸಮಗ್ರಜನರ ಬದುಕು ಸಮಾನತೆಯಿಂದ ಜೀವಿಸಲು ಅವಕಾಶ ಕಲ್ಪಿಸುವುದು ಮೂಲ ಉದ್ದೇಶವಾಗಿತ್ತು. ಸಮಾಜದ ದೀನ ದಲಿತರ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗುವಂತೆ ಸಂವಿಧಾನವನ್ನು ಅತ್ಯಂತ ಸಮರ್ಪಕವಾಗಿ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
 
 
ಅಂಬೇಡ್ಕರ್ ಅವರು ದೀನ ದಲಿತರಿಗೆ ಸಮಾನತೆತರುವ ನಿಟ್ಟಿನಲ್ಲಿ ಅನೇಕ ಹೋರಾಟಗಳನ್ನು ನಡೆಸಿದರು, ಹಾಗೂ ಸ್ವತಂತ್ರ ಭಾತರದ ಮೊದಲ ಕಾನೂನು ಮಂತ್ರಿಯಾಗಿ ಅನೇಕ ಜನಹಿತ ಕಾಯ್ದೆಗಳನ್ನು ಜಾರಿಗೆತಂದರು, ದೇಶದಲ್ಲಿ ದೀನ ದಲಿತರು ಮತ್ತು ಮಹಿಳೆಯರು ತುಳಿತಕ್ಕೊಳಗಾಗುವ ವರ್ಗವಾಗಿರುವುದರಿಂದ ಈ ವರ್ಗದ ಏಳಿಗೆಗೆ ಅನೇಕ ಯೋಜನೆಗಳನ್ನು ಮತ್ತು ಕಾನೂನುಗಳನ್ನು ಜಾರಿಗೆ ತಂದರು. ಮಹಿಳೆಯರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿದರು ಹಾಗೂ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆ ಕಾಯಿದೆ ಜಾರಿಗೆ ತಂದರು. ಅಂಬೇಡ್ಕರ್ ದಿಲಿತನಾಗಿ ಹುಟ್ಟಿದ್ದೇನೆದಲಿತನಾಗಿ ಸಾಯುವುದಿಲ್ಲ ಎಂದು ಹೇಳಿ ತಮ್ಮಜೀವನ ಅಂತಿಮ ದಿನಗಳಲ್ಲಿ ಬೌದ್ಧ ಮತಾವಲಂಬಿಯಾದರು. ಅಂಬೇಡ್ಕರ್ರವರು ಎಲ್ಲಾ ರಂಗಗಳಲ್ಲಿಯೂ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾಗ ಬಡವರಿಗೆ ಉಚಿತವಾಗಿ ವಕೀಲ ಸೇವೆ ನೀಡುತ್ತಿದ್ದರು. ಉಪನ್ಯಾಸಕರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಆಗಿನ ಕಾಲದಲ್ಲಿ ಸಂಘದ 7 ಜನ ಅತೀ ವಿದ್ಯಾವಂತರಲ್ಲಿ ಒಬ್ಬರಾಗಿದ್ದರು ಎಂಬುದನ್ನು ತಿಳಿಸಲು ಹೆಮ್ಮೆಯಾಗುತ್ತದೆ ಎಂದು ತಿಳಿಸಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುಂದೆ ಸಾಗೋಣ ಎಂದು ಕರೆ ನೀಡಿದರು.
 
 
ಸಮಾರಂಭದ ಮುಖ್ಯಉಪನ್ಯಾಸಕರಾಗಿ ಆಗಮಿಸಿದ ಕುಂದಾಪುರ ವೆಂಕಟರಮಣ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಗಣೇಶ ನಾಯ್ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಾ, ಅಂಬೇಡ್ಕರ್ರವರು ದೇಶದ ಅತಿ ಸಾಮಾನ್ಯರು ಸಮಾಜದ ಮುಖ್ಯ ವಾಹಿನಿಗೆ ತರಲು ಅಂಬೇಡ್ಕರವರು ಮಾಡಿದತ್ಯಾಗ, ಶ್ರಮ ಮತ್ತು ಹೋರಾಟಗಳನ್ನು ವಿವರಿಸಿದರು. ಅಂಬೇಡ್ಕರವರು ಕೆಸರಿನಲ್ಲಿ ಅರಳಿದ ಕಮಲದ ಹೂವು, ದೇಶದ ನಿಮ್ಮ ವರ್ಗದವರ ಉದ್ದಾರವೇ ಅವರ ಮುಖ್ಯ ಉದ್ದೇಶವಾಗಿತ್ತು, ದೇಶದ, ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಇದು ಅವರ ಧ್ಯೇಯವಾಗಿತ್ತು ಎಂದರು. ಮತ್ತು ಆಡಳಿತದಲ್ಲಿ ಅಸಮಾನತೆ ಇರಬಾರದು ಎಂಬುದು ಅವರವಾದವಾಗಿತ್ತು. ಅವರು 1930 ರಲ್ಲಿ ನಡೆದ 2ನೇ ದುಂಡು ಮೇಜಿನ ಪರಿಷತ್ನಲ್ಲಿಭಾರತ ಸ್ವಾತಂತ್ರ್ಯದ ಹಕ್ಕನ್ನು ಮಂಡಿಸಿದರು, ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಪವರ್ಗ್ರಿಡ್ ಆಫ್ ಇಂಡಿಯಾ, ಸೆಂಟ್ರಲ್ ಇರಿಗೇಷನ್ ಸಂಸ್ಥೆಗಳ ಸ್ಥಾಪನೆಯಕರ್ತ ವಾಗಿದ್ದಾರೆ ಎಂದರು.
 
 
ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ ಅಧೀಕ್ಷಕ ಅಭಿಯಂತರಾದಎನ್. ಉದಯನಾಯ್ಕ್, ವೈದ್ಯಕೀಯ ಅಧೀಕ್ಷಕರಾದ ಡಾ|| ವಿಜಯಲಕ್ಷ್ಮಿ ನಾಯಕ್, ಕೆಪಿಸಿ, ಪ.ಜಾ/ಪ.ಪಂ.ನೌಕರರ ಸಂಘದ ಅಧ್ಯಕ್ಷರಾದ ಜಿ. ಸೀತಾರಾಮಪ್ಪ ಸಮಾರಂಭವನ್ನುದ್ದೇಶಿಸಿ ಡಾ|| ಅಂಬೇಡ್ಕರ್ರವರ ಜೀವನ, ಹೋರಾಟ, ತ್ಯಾಗ, ಹಾಗೂ ದೇಶದ ಏಳಿಗೆಗಾಗಿ ಮಾಡಿರುವ ಅನೇಕ ಕಾಯಿದೆಗಳ ಕುರಿತು ವಿವರಿಸಿದರು.
 
 
ಇದೇ ಸಂದರ್ಭದಲ್ಲಿಅಂಬೇಡ್ಕರ್ ಜಯಂತಿ ಸಂಬಂಧ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ವರ್ಧೆಯಲ್ಲಿ ವಿಜೇತ ಉದ್ಯೋಗಿಗಳಿಗೆ ಬಹುಮಾನ ವಿತರಿಸಲಾಯಿತು.
ಕೆ. ನಾಗರಾಜ, ಎಂಜಿಎಂರವರು ಪ್ರಾರ್ಥಿಸಿದರು, ಸಂದೇಶ್, ಎಇ(ಸಿಸ್ಟಂಸ್) ಸ್ವಾಗತಿಸಿದರು. ದಿನೇಶ್, ಸಹಾಯಕ(ಆಡಳಿತ) ಅತಿಥಿಗಳ ಪರಿಚಯ ಮಾಡಿದರು. ವಿ. ದೇವರಾಜ್ ಕಛೇರಿ ವ್ಯವಸ್ಥಾಪಕರು ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕುಮಾರ್.ಟೆಕ್ನಿಷಿಯನ್ ವಂದಿಸಿದರು.
ವರದಿ: ಆಲ್ಪೋನ್ಸ್ ಡೊಮೆಲ್ಲೊಎಸ್.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here