12 ಸ್ಥಳಗಳಲ್ಲಿ ಸೆಲ್ಫಿ ನಿಷೇಧ

0
320

ಬೆಂಗಳೂರು ಪ್ರತಿನಿಧಿ ವರದಿ
ಲಾಲ್ ಬಾಗ್ ನ 12 ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಲಾಲ್ ಬಾಗ್ ಜಂಟಿ ನಿರ್ದೇಶಕ ಡಾ.ಜಗದೀಶ್ ಹೇಳಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ಜ.20ರಿಂದ 29ರವರೆಗೆ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ.
 
 
ಲಾಲ್ ಬಾಗ್ ಒಳಗಿನ ಕೆರೆ ಸುತ್ತಮುತ್ತ 6 ಇಳಿಜಾರು ಪ್ರದೇಶ, ಬಂಡೆ ಕಲ್ಲಿನ ತಗ್ಗಾದ 2 ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಮರಗಳ ಮೇಲೆ ಹತ್ತಿ ಸೆಲ್ಫಿ ಫೋಟೋ ತೆಗೆದುಕೊಳ್ಳುವುದನ್ನೂ ನಿಷೇಧಿಸಲಾಗಿದೆ. ತೂಗುಸೇತುವೆಗಳ ಮೇಲೆ ಸೆಲ್ಫಿ ತೆಗೆದುಕೊಳ್ಳುವುದಕ್ಕೂ ನಿಷೇದ ಹೇರಲಾಗಿದೆ.
 
 
ಅಪಾಯದ ಸ್ಥಳಗಳೆಂದು ಗುರುತಿಸಿ ನಾಲಫಲಕ ಅಳವಡಿಕೆ ಮಾಡಲಾಗುತ್ತದೆ. ನಾಮಫಲಕ ಅಳವಡಿಸಿದ ಸ್ಥಳಗಳಲ್ಲಿ ಸೆಲ್ಫಿಗೆ ನಿಷೇಧಿಸಲಾಗಿದೆ ಎಂದು ಲಾಲ್ ಬಾಗ್ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here