ರಾಷ್ಟ್ರೀಯತೆ ಏನಿದರ ಪ್ರಸ್ತುತೆ?

0
395

ಮಸೂರ ಅಂಕಣ: ಆರ್ ಎಂ ಶರ್ಮ
ಈಗ ದೇಶದ ಎಲ್ಲಾ ಮೂಲೆಮೂಲೆಗಳಲ್ಲಿ ಅನವರತ ಬಿಸಿ ಬಿಸಿ ಚಚೆ೯ ನಡೆಯುತ್ತಿರುವುದು-ರಾಷ್ಟ್ರೀಯತೆ ಬಗೆಗೆ.
ಏಕೆ ಈಗಿದರ ಅವಸರ?
ಸದಾ ಕೇಳಿಬರುತ್ತಿದೆ ಅಪಸ್ವರ,ಅವಾಂತರ-ಅವಘಢ!
ದಷ್ಟ-ಪುಷ್ಟ-ಶಿಷ್ಟ-ಪ್ರಜಾಪ್ರಭುತ್ವ-ಪಕ್ವ ಆದರೂ ಅನುಮಾನ-ಅವಮಾನ-ಎಲ್ಲಾ ಸೀಮೆಗಳನ್ನೂ ದಾಟಿದೆ-ಧಾವಿಸಿದೆ ಒಂದು ಬಲವಾದ ರಾಷ್ಟ್ರವಾದದ ಮಂಡನೆಗೆ.
ರಾಷ್ಟ್ರೀಯತೆ-“ನ್ಯಾಷನಲಿಸಂ”-ಒಂದು ಬುದ್ಧಿಜೀವಿಗಳ ಚಂತನೆ-ಮಂಥನದಲ್ಲಿ-ಸಂಪೂಣ೯ವಲ್ಲ-ಅದು ನ್ಯುನತೆಯನ್ನು ಹೊಂದಿದೆ-ಮೀರಿಕೇಳಿದರೆ ಅದು ಸಂಕುಚಿತ-ಕೆಲ ಗುಂಪುಗಳ-ಯೋಚನೆಗಳ-ಯೋಜನೆಗಳ ವ್ಯವಸ್ಥಿತ ಕಾಯ೯ವೈಖರಿ.
ಅದು ಹಾಗಿರಲಿ ಮುಂದೆ ಹೋಗೋಣ.
ದೇಶಭಕ್ತಿ-“ಪೇಟ್ರಿಯಾಟಿಸಂ!”-ಇದು ಸಂಪೂಣ೯-ಬಹು ಅಗತ್ಯ-ಇಲ್ಲಿ ಯಾವ ಸಂಕುಚಿತತೆ ಇಲ್ಲ.
ಇದು ಸಾವ೯ಕಾಲಿಕ-ಜಾತ್ಯತೀತ-ಒಂದೇ ಮಾತಿನಲ್ಲಿ ಹೇಳುವುದಾದರೆ-ಭಾರತಕ್ಕೆ ಇದೇ ಸರಿ-ಇದೇನಿಜವಾದಭಾರತದ ಜನತೆಯ ಆಸ್ತಿ-ಆಸ್ಥೆ-ಅಸ್ತಿ.
ಇದೇ ಭಾರತದ ಬಲಿಷ್ಟ ಭಾರತದ ಅಡಿಪಾಯ.
ಇದಕ್ಕೆ ಅಪಾಯ-ರಾಷ್ಟ್ರೀಯತೆ ವಾದ.
ಹಾಗಾಗಿ ಭಾರತದ ಪ್ರತಿ ಪ್ರಜೆಯ ನಿಷ್ಟೆ-ದೇಶಭಕ್ತಿ ಆಗಿರಲೇಬೇಕು-ಇದಕ್ಕೆ ವಿರೋಧ ಭಾರತದ ವಿರೋಧ ಎಂತಲೇ ನಿಧಾ೯ರ.ಸರಿ
ಈಗ ಭಾರತದ ಜನತೆಯ ಅಭಿಪ್ರಾಯ ಹಂಚಿಹೋಗಿದೆ.
ನಿಜಕ್ಕೂ ಯಾವುದುಸರಿ ಮತ್ತು ಏಕೆ?
ಬನ್ನಿರಿ ಚಚಿ೯ಸೋಣ.
ಭಾರತದಲ್ಲಿ ಈಗ ಪ್ರಚಲಿತವಿರುವ ಕೆಲವು ಮಹತ್ವದ ಸಂಗತಿಗಳನ್ನು ಗಮನಿಸೋಣ-
ಭಾರತದ ರಾಷ್ಟ್ರಪತಿ, ಭಾರತದ ರಾಷ್ಟ್ರಧ್ವಜ,ಭಾರತದ ರಾಷ್ಟ್ರಗೀತೆ,ರಾಷ್ಟ್ರೀಯ ಸುದ್ದಿಗಳು,ರಾಷ್ಟ್ರೀಯ ಹೆದ್ದಾರಿಗಳು,ರಾಷ್ಟ್ರೀಯ ರಾಜಕೀಯ ಪಕ್ಷಗಳು,ಆ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರುಗಳು,ಬ್ಯಾಂಕ್ ಗಳ ರಾಷ್ಟ್ರೀಕರಣ,ಭಾರತದ ರಾಷ್ಟ್ರೀಯಪಕ್ಷಿ,ಭಾರತದ ರಾಷ್ಟ್ರೀಯ ವನ್ಯಮೃಗ,
ರಾಷ್ಟ್ರೀಯ ಯೋಜನೆಗಳು,ರಾಷ್ಟ್ರೀಯ ನೀತಿಗಳು,ರಾಷ್ಟ್ರೀಯ ಆಟೋಟಗಳು,ರಾಷ್ಟ್ರೀಯ ಕೂಟಗಳು,ಕಮ್ಮಟಗಳು,ಚಚೆ೯ಗಳು-ಈ ರಾಷ್ಟ್ರೀಯ ಪದಪ್ರಯೋಗಗಳಿಗೆ ಕೊನೆ ಉಂಟೆ ಎಂದರೆ ಸರಿಯಾದ ಉತ್ತರ-ಇಲ್ಲ ಎಂತಲೇ.
ಈ ರಾಷ್ಟ್ರೀಯ ಚಿಂತನೆ-ಸಂಗತಿ-ಸಂಗಾತಿ-ಗತಿ-ಮತಿ-ಪ್ರೀತಿ ಹೀನವಾಗಿದ್ದರೆ ಇದೇಕೆ ಚಾಲ್ತಿಯಲ್ಲಿದೆ-ಚಾಲ್ತಿಯಲ್ಲಿರಲು ಬಿಡಲ್ಪಟ್ಟಿದೆ?
ಇದು ಸಮಂಜಸವಾದ ಪ್ರಶ್ನೆಯಲ್ಲವೇ?
ಒಂದೊಮ್ಮೆ ದೇಶ ಪದವೇ ಸೂಕ್ತವೆನಿಸಿದ್ದರೆ ಅದೇಕೆ ಎಲ್ಲೆಲ್ಲೂ ಯವಾಗಲೂ ಬಳಕೆಯಲ್ಲಿ ಇಲ್ಲ-ಸಲ್ಲ?
ಈಗೆಲ್ಲಿ “ಪೇಟ್ರಿಯಾಟಿಸಂ”-ಗಡಣ ಇದರ ನಿಮೂ೯ಲಕ್ಕೆ?
ಈಗ ಭಾರತದ ಮಹಾನ್ ಜನೆತೆಗೆ ಯಾರು ಸರಿಯಾದ ಮಾಗ೯ದಶ೯ನದ ಜವಾಬ್ದಾರಿಯನ್ನು ಹೊರಬೇಕು?
ಇನ್ನು ಮುಂದಕ್ಕೆ ಭಾರತದಲ್ಲಿ-“ರಾಷ್ಟ್ರೀಯತೆ”-ಮಾತನ್ನು ಆಡಬೇಕೆ ಬೇಡವೇ?
ಇನ್ನು ಮುಂದೆ ಭಾರತಕ್ಕೆ ಕೇವಲ-“ದೇಶ”-ಈ ಪದವನ್ನು ಜೋಡಿಸಿದ ಎಲ್ಲಾಬಗೆಯಪದಗುಚ್ಛಗಳ ಬಳಕೆಯೇ ಜಾರಿಯಲ್ಲಿರಬೇಕೆ?
ದೇಶ ಪ್ರಾಣ-ರಾಷ್ಟ್ರ ನಿತ್ರಾಣ ಇದು ಯಾರೂ ಒಪ್ಪುವ ಒಪ್ಪವಾದ ವಾದವೇ?
ಒಂದೊಮ್ಮೆ ದೇಶಪದವೇ ನಿಜವಾದ ದೇಶಭಕ್ತಿಯ ಸಂಕೇತವಾದರೆ,ಆಗ “ರಾಷ್ಟ್ರಿಯ ಪದ”-ಜೋಡಿಸಿಬಳಸುವ,ಬಡಸಲ್ಪಡುವ ಪ್ರಯೋಗಗಳನ್ನು ಘನಿಷ್ಟ ದೇಶದ್ರೋಹ ಎಂತ ತೀಮಾ೯ನಿಸಿ ಕಾನೂನಿನ ಕ್ರಮಗಳು ಜಾರಿಗೊಳಿಸಲ್ಪಡಬೇಡವೇ?
ಭಾರತದ ನೆಲದ ಉದ್ದಗಲಕ್ಕೂ ಇನ್ನು ಮುಂದೆ ಸದಾ -“ದೇಶ”-ಇದೇ ಸರಿಯಾದ ಬಳಕೆಯ ಕ್ರಮ ಎಂಬ ನೀತಿಯನ್ನು ಜಾರಿಗೆ ತರುವುದು ಅಗತ್ಯವಲ್ಲವೇ?
ಈ ಪ್ರಥ ಸದ ಅಬಾಧಿತವಾಗಿರಲು-ಎಲ್ಲ ಹಂತದಲ್ಲಿ-ಜನ ಜಾಗೃತಿ-ಚಚೆ೯,ಕಾಯ೯ಕಮ್ಮಟಗಳು,ಶಾಲೆಗಳಲ್ಲಿ,ಶಿಕ್ಷಣ ಸಂಸ್ಥೆಗಳಲ್ಲಿ-ಸೂಕ್ತಪಾಠಪ್ರವಚನಗಳು-ಸೂಕ್ತ ಪಠ್ಯವಸ್ತುಗಳು ಎಲ್ಲ್ಲಾ ವ್ಯವಸ್ಥಿತವಾಗಿ ಕೆಲಸಗಳನ್ನು ನಿವ೯ಹಿಸುವಂತೆ ಆಡಳಿತದ ಯಂತ್ರಗಳು ಸಿದ್ಧಗೊಳ್ಳಬೆಡವೇ?
ಭಾರತದ ಜನ-ಮನ-ಕಾಯಕ-“ಸದಾ ದೇಶ ಜಪ” ಇದರಲ್ಲಿಯೇ ತಲ್ಲೀನತೆ,ತನ್ಮಯತೆ,ಧನ್ಯತೆ ಪಡೆಯುವಂತೆ ಅಣಿಗೋಳಿಸಲು ಇದೇ ಮುಹೂತ೯ವಲ್ಲವೇ?
ನಾವು ಓದುಗ ವೃಂದವನ್ನು ವಿನೀತರಾಗಿ ಪ್ರಾಥಿ೯ಸುತ್ತಾ ಈ ಪ್ರಸ್ತಾವನೆಯನ್ನು ಅವರ ಮುಂದೆ ಇಡುತ್ತಿದ್ದೇವೆ.
ಚಚಿ೯ಸಿರಿ,ವಾದಿಸಿರಿ, ಭೇದಿಸಿರಿ,ಸತ್ಯವನ್ನು ಪ್ರತಿಪಾದಿಸಿರಿ,ಭಾರತವನ್ನು ಸರಿದಾರಿಯಲ್ಲಿ ಕೊಂಡೊಯ್ಯಿರಿ.
ಇದು ಭಾರತಕ್ಕೂ ಭಾರತದ ಹೊರಜಗತ್ತಿಗೂ ಭಾರತದ-ದಿವ್ಯದಶ೯ನವನ್ನು ಮಾಡಿಸುತ್ತದೆ.
ಭಾರತದ-ಹಿರಿಮೆಗೆ-ಗರಿಮೆಗೆ-ಮೇಲ್ಮೆಗೆ ಇದು ಪರಮೋಚ್ಚ.
ಆರ್.ಎಂ.ಶಮ೯,
ಮಂಗಳೂರು
[email protected]

LEAVE A REPLY

Please enter your comment!
Please enter your name here