105ನೇ ಸ್ವಚ್ಛತಾ ಅಭಿಯಾನ

0
356


ಮೂಡುಬಿದಿರೆ: ಜವನೆರ್ ಬೆದ್ರ ಸಂಘಟನೆಯ ಕ್ಲೀನ್ ಅಪ್ ಮೂಡುಬಿದಿರೆ' ಯೋಜನೆಯನ್ವಯ 105ನೇ ಸ್ವಚ್ಛತಾ ಅಭಿಯಾನ ಮೂಡುಬಿದಿರೆ ಪೊನ್ನಚ್ಚಾರಿ ಪರಿಸರದಲ್ಲಿ ಭಾನುವಾರ ನಡೆಯಿತು. ಸ್ಥಳೀಯ ಮುಖಂಡ ಸುಧಾಕರ ಶೆಟ್ಟಿ ಸಹಿತ ಹಲವು ಮಂದಿ ಪಾಲ್ಗೊಂಡರು. ಪೊನ್ನೆಚ್ಚಾರಿ ಪರಿಸರದಲ್ಲಿ ನಿರಂತರ ಕಸ ತ್ಯಾಜ್ಯವನ್ನು ರಸ್ತೆ ಬದಿಗಳಲ್ಲಿ ಸುರಿಯುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘಟನೆಯ ಸಂಸ್ಥಾಪಕ ಅಮರ್ ಕೋಟೆ ಪುರಸಭೆಗೆ ವಿನಂತಿಸಿದರು.ಮೂಡುಬಿದಿರೆಯ ಪೊನ್ನಚ್ಚಾರಿ ಪರಿಸರದಲ್ಲಿರುವ ಪ್ರತಿಷ್ಠಿತ ವಸತಿ ಸಮುಚ್ಛಯವೊಂದರಲ್ಲಿ ವಿದ್ಯಾವಂತ ಕುಟುಂಬಗಳು ವಾಸಿಸುತ್ತಿವೆ. ಆ ವಸತಿ ಸಮುಚ್ಛಯದ ಸನಿಹವೇ ರಾಜಕಾಲುವೆಯೊಂದು ಹರಿಯುತ್ತಿದೆ. ವಸತಿ ಸಮುಚ್ಛಯದಲ್ಲಿರುವ ಪ್ರತಿಷ್ಠಿತರು ತಮ್ಮ ಮನೆಯ ತ್ಯಾಜ್ಯವನ್ನುಪ್ಲಾಸ್ಟಿಕ್ ಕವರ್’ಗಳಲ್ಲಿ ಕಟ್ಟಿ ಕಾಲುವೆಗೆ ಎಸೆಯುತ್ತಿರುವ ಬಗ್ಗೆ ಜವನೆರ್ ಬೆದ್ರ ಸಂಘಟನೆಯ ಸದಸ್ಯರು ಮೂಡುಬಿದಿರೆ ಪುರಸಭೆಗೆ ಮನವರಿಕೆ ಮಾಡಿ ಮನವಿ ಸಲ್ಲಿಸಿತು. ಮೂಡುಬಿದಿರೆ ಪುರಸಭೆಯ ಇಂಚಾರ್ಜ್ ಹೆಲ್ತ್ ಆಫೀಸರ್ ಮಂಜುನಾಥ್ ಅವರಿಗೆ ಮನವಿಯೊಂದನ್ನು ನೀಡಿದರು.

LEAVE A REPLY

Please enter your comment!
Please enter your name here