ಪರಿಸ್ಥಿತಿ ಅವಲೋಕನ

0
589

ರಾಷ್ಟ್ರೀಯ ಪ್ರತಿನಿಧಿ ವರದಿ
ಆಂತರಿಕ ಭದ್ರತೆ ಸಂಬಂಧ ಇಂದು ಮಹತ್ವದ ಸಭೆ ನಡೆಯಲಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಐಟಿಬಿಪಿ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಕ್ಯಾಬಿನೆಟ್ ರಕ್ಷಣಾ ಉಪಸಮಿತಿ (ಸಿಸಿಎಸ್) ಸಭೆ ಕರೆದಿದ್ದರು.
ಆಂತರಿಕ ಭದ್ರತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯಲ್ಲಿ ಭಾರತೀಯ ಸೇನೆಯ ಪ್ರಮುಖ ಅಧಿಕಾರಿಗಳೂ ಸಹ ಭಾಗಿಯಾಗಲಿದ್ದಾರೆ.
 
ಜನರ ಸ್ಥಳಾಂತರ
ಭಾರತದ ಸೀಮಿತ ದಾಳಿಗೆ ಪಾಕ್ ಪ್ರತಿದಾಳಿ ನಡೆಸುವ ಸಾಧ್ಯತೆ ಹಿನ್ನೆಯಲ್ಲಿ ಕಾಶ್ಮೀರದ ಗಡಿ ಭಾಗದಲ್ಲಿದ್ದ 20 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದೆ. ಗಡಿಯಲ್ಲಿ ಪಾಕ್ ನಿಂದ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಭಾರತೀಯ ಸೇನೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

LEAVE A REPLY

Please enter your comment!
Please enter your name here