ಹೊಲಿಗೆ ತರಬೇತಿಗೆ ಅರ್ಜಿ

0
1551

ಉಡುಪಿ ಪ್ರತಿನಿಧಿ ವರದಿ
ಉಡುಪಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲ್ಪಡುವ ಉಚಿತ ಹೊಲಿಗೆ ತರಬೇತಿ ಕೇಂದ್ರದಲ್ಲಿ 2016-17 ನೆ ಸಾಲಿನಲ್ಲಿ ಒಂದು ವರ್ಷ ಅವಧಿಯ ಹೊಲಿಗೆ ತಬೇತಿಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
 
ಅಜಿ ಸಲ್ಲಿಕೆಗೆ ವರ್ಗ 2ಎ, 2ಬಿ, 3ಎ,3ಬಿ ಅಭ್ಯರ್ಥಿಗಳಿಗೆ ವಾರ್ಷಿಕ ವರಮಾನದ ಮಿತಿ ರೂ.44,500 ಆಗಿದ್ದು, ವರ್ಗ1 ಮತ್ತು ಪ.ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ವರಮಾನದ ಮಿತಿ ಇರುವುದಿಲ್ಲ. ವಿದ್ಯಾರ್ಹತೆ ಕನಿಷ್ಠ 7 ನೇ ತರಗತಿ ತೇರ್ಗಡೆಯಾಗಿರಬೇಕು. 18 ರಿಂದ 35 ವರ್ಷದ ಒಳಗಿನ ವಯೋಮಿತಿ ಇರಬೇಕು. ಆಯ್ಕೆಯಲ್ಲಿ ವಿಧವೆಯರಿಗೆ ಮತ್ತು ನಿರ್ಗತಿಕರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.300 ತರಬೇತಿ ಭತ್ಯೆಯನ್ನು ನೀಡಲಾಗುವುದು.
 
 
 
ತರಬೇತಿ ಅಂತ್ಯದಲ್ಲಿ ನಡೆಯುವ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಉಚಿತ ಹೊಲಿಗೆಯಂತ್ರ ನೀಡಲಾಗುವುದು.
ಅರ್ಜಿಗಳನ್ನು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ, ಉಡುಪಿ ಅಥವಾ ಹೊಲಿಗೆ ತರಬೇತಿ ಕೇಂದ್ರ, ಬನ್ನಂಜೆ, ಇಲ್ಲಿಂದ ಪಡೆದು , ಮೇ 30 ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here