10 ಮಂದಿಗೆ ಕೊಕ್ ಸಾಧ್ಯತೆ!

0
416

 
ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯ ಸಚಿವ ಸಂಪುಟದಲ್ಲಿ ಕರಾವಳಿ ಶಾಸಕರು ಸೇರಿದಂತೆ 10 ಮಂದಿಗೆ ರಾಜ್ಯ ಸಂಪುಟದಿಂದ ಕೊಕ್ ಸಿಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
 
 
ದೆಹಲಿಯಲ್ಲಿ ರಾಜ್ಯ ಸಂಪುಟ ರಚನೆಯ ಬಗ್ಗೆ ಸಭೆ ನಡೆಯುತ್ತಿದ್ದು,ಅಭಯ್ ಚಂದ್ರ ಜೈನ್, ಯು ಟಿ ಖಾದರ್, ಕಿಮ್ಮನೆ ರತ್ನಾಕರ್, ಪಿ ಟಿ ಪರಮೇಶ‍್ವರ್ ನಾಯ್ಕ್, ಎಂ ಹೆಚ್ ಅಂಬರೀಶ್ ಸೇರಿ 10 ಸಚಿವರಿಗೆ ಗೇಟ್ ಪಾಸ್ ಸಿಗುವ ಸಾಧ್ಯತೆಯಿದೆ.
 
 
 
ಸಂಪುಟ ಪುನಾರಚನೆಯಲ್ಲಿ ಹೊಸಮುಖಗಳಿಗೆ ಅವಕಾಶ ದೊರೆಯಲಿದ್ದು, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್, ಚೆನ್ನಪಟ್ಟಣ್ಣ ಶಾಸಕ ಸಿಪಿ ಯೋಗೇಶ್ವರ್ ಸೇರಿ ಹಲವು ಹೊಸಬರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆಯಿದೆ. ಇನ್ನು ಯಾರಿಗೆ ಯಾವ ಸ್ಥಾನ ಲಭಿಸುತ್ತದೆ ಎಂದು ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here