1 ಸಾವಿರ ರೂ. ಹೊಸ ನೋಟು ಬರಲ್ಲ

0
256

ರಾಷ್ಟ್ರೀಯ ಪ್ರತಿನಿಧಿ ವರದಿ
1 ಸಾವಿರ ರೂ.ಮುಖಬೆಲೆ ಹೊಸ ನೋಟು ಸದ್ಯ ಬರುವುದಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಇಂದು ಸಂಜೆಯಿಂದ ಎಲ್ಲಾ ಎಟಿಎಂಗಳಿಗೆ ಹೊಸನೋಟು ಹಾಕಲಾಗುತ್ತದೆ. 22, 500 ಎಟಿಎಂಗಳಿಗೆ ಹೊಸ ನೋಟು ತುಂಬಿಸುತ್ತೇವೆ. ಎಲ್ಲೆಡೆ ಹೊಸ ನೋಟು ಸಿಗುವಂತೆ ವ್ಯವಸ್ಥೆ ಮಾಡುತ್ತಿದ್ದೇವೆ. ಶೀಘ್ರವೇ ಎಲ್ಲವೂ ಯಥಾಸ್ಥಿತಿಗೆ ಬರಲಿದೆ. ಖಾಸಗಿ ಆಸ್ಪತ್ರೆಗಳು ಹಳೆಯ ನೋಟು ಸ್ವೀಕರಿಸುವುದಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.
 
 
50 ಮತ್ತು 100ರೂ.ನೋಟು ನಿಷೇಧ ಇಲ್ಲ
500 ಮತ್ತು 1000ರು. ಮುಖಬೆಲೆಯ ನೋಟುಗಳು ನಿಷೇಧವಾದ ಬೆನ್ನಲ್ಲೇ 50 ಮತ್ತು 100ರೂ. ಮುಖಬೆಲೆಯ ನೋಟುಗಳು ಕೂಡ ನಿಷೇಧವಾಗಲಿವೆ ಎಂಬ ಊಹಾಪೋಹವನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಅಲ್ಲಗಳೆದಿದ್ದು, ಪ್ರಸ್ತುತ 50 ಮತ್ತು 100 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಯಾವುದೇ ಪ್ರಸ್ತಾವವಿಲ್ಲ ಎಂದು ಸ್ಪಷ್ಟಪಡಿಸಿದೆ

LEAVE A REPLY

Please enter your comment!
Please enter your name here