೬೫ನೇ ಕ್ಲೀನ್‌ ಅಪ್‌ ಮೂಡುಬಿದಿರೆ ಸಂಪನ್ನ

0
1222

ಸೋಲು ಸಂಘಟನೆಯ ಬಲ ಕುಗ್ಗಿಸಿಲ್ಲ- ಸಾಬೀತು

ಮೂಡುಬದಿರೆ: ಜವನೆರ್‌ ಬೆದ್ರ ಸಂಘಟನೆಯ ಆಶ್ರಯದಲ್ಲಿ ೬೫ನೇ ವಾರದ ಸ್ವಚ್ಛತಾ ಅಭಿಯಾನ್‌ ʻಕ್ಲೀನ್‌ ಅಪ್‌ ಮೂಡುಬಿದಿರೆʼಯಶಸ್ವಿಯಾಗಿ ಭಾನುವಾರ ನಡೆಯಿತು. ಮಳೆ ಬಿಸಿಲೆನ್ನದೆ ಕಳೆದ ೬೪ವಾರಗಳಿಂದ ಕ್ಲೀನ್‌ ಅಪ್‌ ಮೂಡುಬಿದಿರೆ ಕಾರ್ಯಕ್ರಮ ಅಮರ್‌ ಕೋಟೆ ನೇತೃತ್ವದಲ್ಲಿ ನಡೆಯುತ್ತಾ ಬಂದಿದೆ.

ಇದೀಗ ಕ್ಲೀನ್‌ ಅಪ್‌ ಗೆ ೬೫ರ ಸಂಭ್ರಮ.

ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಬಳಿ, ಆಳ್ವಾಸ್‌ ಆಸ್ಪತ್ರೆ ಆವರಣ ಹಾಗೂ ಪರಿಸರದಲ್ಲಿ ಕ್ಲೀನ್‌ ಅಪ್‌ ಕಾರ್ಯಕ್ರಮ ನಡೆಯಿತು. ಪರಿಸರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌, ಕಸ, ಲಕೋಟೆ,ತ್ಯಾಜ್ಯಗಳನ್ನು ಸಂಘಟನೆಯ ಸದಸ್ಯರು ಸಂಗ್ರಹಿಸಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಸವತ್ರ ಮನ್ನಣೆ: ಮೂಡುಬಿದಿರೆ ಜವನೆರ್‌ ಬೆದ್ರ ಸಂಘಟನೆ ನಿರಂತರವಾಗಿ ನಡೆಸಿಕೊಂಡು  ಬರುತ್ತಿರುವ ಕ್ಲೀನ್‌ ಅಪ್‌ ಕಾರ್ಯಕ್ರಮಕ್ಕೆ ಸರ್ವತ್ರ ಮನ್ನಣೆ ವ್ಯಕ್ತವಾಯಿತು. ಸಂಘಟನೆಯ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು.

Advertisement

LEAVE A REPLY

Please enter your comment!
Please enter your name here