ಹ್ಯಾಲಿಪ್ಯಾಡ್ ಗೆ ಬಂದಿಳಿದ ಸಿಎಂ

0
233

ಬೆಳಗಾವಿ ಪ್ರತಿನಿಧಿ ವರದಿ
ಇದೇ ಮೊದಲ ಬಾರಿಗೆ ಸುವರ್ಣಸೌಧದೊಳಗೆ ಹ್ಯಾಲಿಪ್ಯಾಡ್ ನಿರ್ಮಿಸಿರುವುದು ವಿಶೇಷವಾಗಿದ್ದು, ಸುವರ್ಣಸೌಧದ ಆವರಣದ ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್ ಆಗಿದೆ.
 
 
 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಿಕ್ಕೋಡಿಯಿಂದ ಬೆಳಗಾವಿಯ ಸುವರ್ಣಸೌಧಕ್ಕೆ ಹೆಲಿಪ್ಯಾಡ್ ಮೂಲಕ ಆಗಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಚಿವರಾದ ಕೆ ಜೆ ಜಾರ್ಜ್, ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ ಸಾಥ್ ನೀಡಿದ್ದಾರೆ.
 
 
 
ಸಿಎಂ ಅವರು ಗೋಕಾಕ್ ನಿಂದ ಸುವರ್ಣಸೌಧಕ್ಕೆ ಆಗಮಿಸಿದ್ದಾರೆ. ಸಚಿವರ ಜಾರಕಿಹೊಳಿ ಪುತ್ರನ ಮದುವೆ ಹಿನ್ನೆಲೆಯಲ್ಲಿ ಗೋಕಾಕ್ ನಲ್ಲಿ ಉಪಹಾರ ಕೂಟದಲ್ಲಿ ಭಾಗಿಯಾಗಿದ್ದರು.
 
 
ಅಲ್ಲದೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸುವರ್ಣಸೌಧದ ಎದರು ಸಾಕಷ್ಟು ಪ್ರತಿಭಟನೆ ನಡೆದಿದ್ದು, ಈ ಪ್ರತಿಭಟನೆಯ ಬಿಸಿಯಿಂದ ತಪ್ಪಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

LEAVE A REPLY

Please enter your comment!
Please enter your name here