ಹ್ಯಾಂಡ್‍ಬಾಲ್ ಟೂರ್ನಮೆಂಟ್ ಉದ್ಘಾಟನೆ

0
68

ಮೂಡಬಿದಿರೆ: ‘ಯಾವುದೇಕ್ಷೇತ್ರದಲ್ಲಿ ಸೋಲು, ಗೆಲುವು ಸಾಮಾನ್ಯ ಅವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಪ್ರತಿಯೊಬ್ಬ ಕ್ರೀಡಾಪಟುವು ಬೆಳೆಸಿಕೊಳ್ಳಬೇಕು’ ಎಂದು ಮೂಡುಬಿದಿರೆ ಪೋಲಿಸ್ ಇನ್ಸ್‍ಪೆಕ್ಟರ್ ದಿನೇಶ್‍ಕುಮಾರ್ ಹೇಳಿದರು.

ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ ಮಂಗಳೂರು ವಿವಿ ಅಂತರ್‍ಕಾಲೇಜು ಪುರುಷರ ಹ್ಯಾಂಡ್ ಬಾಲ್ ಟೂರ್ನಮೆಂಟ್‍ನ ಗೌರವ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಗೆಲ್ಲಬೇಕೆಂಬ ಆಸೆಯಿಂದ ಕೆಲವು ಕ್ರೀಡಾಪಟುಗಳು ಮಾದಕ ದ್ರವ್ಯಗಳನ್ನು ಸೇವಿಸುತ್ತಾರೆ. ಆಟಗಾರರು ಡೋಪಿಂಗ್‍ಗೆ ಬಲಿಯಾಗದೇ ಸ್ವಸಾಮಥ್ರ್ಯದಿಂದ ಕ್ರೀಡೆಯಲ್ಲಿ ಜಯ ಗಳಿಸಬೇಕು. ಮತ್ತೊಬ್ಬರಿಗೆ ತೃಪ್ತಿ ಪಡಿಸುವ ಸಲುವಾಗಿ ಆಟವಾಡದೇ ಸ್ವಚ್ಛಂದ ಮನಸ್ಸಿನಿಂದ, ಕ್ರೀಡಾ ಮನೋಭಾವನೆಯಿಂದ ಆಡಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡುಬಿದಿರೆ ಪುರಸಭೆಯ ಮುಖ್ಯ ಅಧಿಕಾರಿ ಇಂದು ಎಂ. ‘ಕ್ರೀಡಾ ಜೀವನದಲ್ಲಿ ಬರುವ ಅಡತಡೆಗಳನ್ನು ಸವಾಲಾಗಿ ಸ್ವೀಕರಿಸಬೇಕು. ದೈಹಿಕ ಶಿಕ್ಷಣ ಎಂಬುದು ಮುಖ್ಯ. ಅದರಜೊತೆ ಬೌದ್ಧಿಕ ಸಾಮಥ್ರ್ಯ ಬೆಳೆಸಿಕೊಳ್ಳುಬೇಕು, ಆತ್ಮವಿಶ್ವಾಸ ಗೆಲುವಿಗೆ ತುಂಬಾ ಮುಖ್ಯ’ ಎಂದರು.

ಆಳ್ವಾಸ್ ಬಿ.ಪಿ.ಎಡ್. ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ, ಪೂರ್ಣಪ್ರಜ್ಞ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೆಶಕ ಸುಕುಮಾರ ಉಪಸ್ಥಿತರಿದ್ದರು. ಉದಯಕುಮಾರ ವಂದಿಸಿ, ಪೂಜಾ ನಿರೂಪಿಸಿದರು.

LEAVE A REPLY

Please enter your comment!
Please enter your name here