ಹೊಸ ರೂಪದಲ್ಲಿ 1000 ನೋಟ್ ಜಾರಿಗೆ ಚಿಂತನೆ

0
182

ರಾಷ್ಟ್ರೀಯ ಪ್ರತಿನಿಧಿ ವರದಿ
ಇನ್ಮುಂದೆ ಒಂದು ಸಾವಿರ ಮುಖಬೆಲೆಯ ನೋಟ್ ಜಾರಿಗೆ ಬರಲಿದೆ. ಹೌದು ಒಂದು ಸಾವಿರ ರುಪಾಯಿಯ ಹೊಸ ನೋಟನ್ನು ಶೀಘ್ರದಲ್ಲೇ ಚಲಾವಣೆಗೆ ತರಲು ಆರ್ ಬಿ ಐ ನಿರ್ಧರಿಸಿದೆ.
 
 
 
ಹೊಸ ವಿನ್ಯಾಸದ 1,000ರೂ. ಮುಖಬೆಲೆಯ ನೋಟುಗಳ ಮುದ್ರಣದ ಕೆಲಸವನ್ನು ಆರ್‌ಬಿಐ ತ್ವರಿತಗೊಳಿಸಿದೆ. ಹಳೆಯ 1,000 ರೂ. ಮುಖಬೆಲೆಯ ನೋಟುಗಳಿಗಿಂತ ಹೊಸ ನೋಟು ಗಾತ್ರದಲ್ಲಿ ಚಿಕ್ಕದಾಗಿರಲಿದ್ದು, ಸುರಕ್ಷತೆಗೆ ಸಂಬಂಧಿಸಿ ಹೆಚ್ಚು ಅಂಶಗಳನ್ನು ಹೊಂದಿರಲಿದೆ.
 
 
 
ಒಂದು ಸಾವಿರ ರುಪಾಯಿಯ ಹೊಸನೋಟು ಅಂಧರಿಗೆ ಗುರುತಿಸಲು ಸಾಧ್ಯವಾಗುವಂತೆ ಬ್ರೈಲ್‌ಸ್ನೇಹಿ ಆಗಿರಲಿವೆ. 2,000 ಮುಖಬೆಲೆಯ ನೋಟುಗಳಿಗೆ ಚಿಲ್ಲರೆ ದೊರೆಯುವುದು ಕಷ್ಟವಾಗುತ್ತಿದೆ. ಹಾಗಾಗಿ ರು.1,000 ದ ನೋಟುಗಳ ಮುದ್ರಣ ಕಾರ್ಯವನ್ನು ತ್ವರಿತಗೊಳಿಸಲಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here