ಹೊಸ ರೂಪದಲ್ಲಿ 100ರೂ.ನೋಟು

0
301

ನವದೆಹಲಿ ಪ್ರತಿನಿಧಿ ವರದಿ
ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಹಳೆಯ ನೋಟುಗಳಾದ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಆದ ಮೇಲೆ ಹೊಸ 500 ಮತ್ತು 2000 ರು.ಮುಖಬೆಲೆಯ ನೋಟುಗಳನ್ನು ಜಾರಿಗೆ ತಂದಿದೆ. ಈ ಬೆನ್ನಲ್ಲೇ ಆರ್ ಬಿಐ ಇದೀಗ 100 ರು.ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲು ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದೆ.
 
 
ಪ್ರಸ್ತುತ ಇರುವ ಅಂದರೆ ಮಹಾತ್ಮಗಾಂಧಿ ಸರಣಿಯ 2005ರ ನೋಟುಗಳ ವಿನ್ಯಾಸದಲ್ಲೇ ಹೊಸ ನೋಟುಗಳು ಇರಲಿದ್ದು, ಮುದ್ರಣ ವರ್ಷ ಮಾತ್ರ 2017 ಎಂದು ನೋಟಿನ ಹಿಂಭಾಗದಲ್ಲಿ ಮುದ್ರಣವಾಗಲಿದೆ. ನೋಟಿನ ನಂಬರ್ ನಲ್ಲಿ ಆರ್ ಸರಣಿಯಿಂದ ಇರಲಿದ್ದು, ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿಯನ್ನು ಹೊಂದಿರಲಿದೆ. ಉಳಿದಂತೆ ನೋಟಿನ ಮೇಲಿನ ಸಂಖ್ಯೆಗಳ ಗಾತ್ರ ಚಿಕ್ಕದಾಗಿರಲಿದ್ದು, ನೋಟಿನ ಸುರಕ್ಷತೆಯ ಎಳೆ, ಗುರುತಿನ ಚಿನ್ಹೆಯನ್ನು ಹೊಂದಿರಲಿದೆ.
 
 
100ರೂ.ಹಳೆ ನೋಟು ಯಥಾ ಸ್ಥಿತಿಯಲ್ಲೇ ಚಲಾವಣೆಯಲ್ಲಿ ಮುಂದುವರೆಯಲಿವೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಹಳೆಯ 100ರೂ.ನೋಟಿನಲ್ಲಿ ಯಾವುದೇ ಬದಲಾವಣೆ ಇಲ್ಲದೆ, ಇವುಗಳ ಜತೆಗೆ ಹೊಸ ನೋಟುಗಳು ಕೂಡ ಚಲಾವಣೆ ಬರಲಿವೆ ಎಂದು ಆರ್ ಬಿಐ ಹೇಳಿದೆ.

LEAVE A REPLY

Please enter your comment!
Please enter your name here