ರಾಷ್ಟ್ರೀಯ ಪ್ರತಿನಿಧಿ ವರದಿ
ಹೊಸ ವರ್ಷದ ಸಂಭ್ರಮಾಚರಣೆಗೆ ಉಗ್ರರ ಭೀತಿ ಎದುರಾಗಿದೆ. ಭಾರತದ ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ನೈರುತ್ಯ ಭಾರತದ ಪ್ರವಾಸಿಗರನ್ನು ಟಾರ್ಗೆಟ್ ಮಾಡಿರುವ ಶಂಕೆಯಿದೆ ವ್ಯಕ್ತವಾಗಿದೆ. ಉಗ್ರರ ದಾಳಿ ಕುರಿತು ಇಸ್ರೇಲ್ ನ ಭಯೋತ್ಪಾದನಾ ನಿಗ್ರಹದಳ ಮಾಹಿತಿ ನೀಡಿದೆ.
ಇದರಿಂದ ದೇಶದಲ್ಲಿನ ಎಲ್ಲಾ ಪ್ರವಾಸಿ ತಾಣಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕಡಲ ಕಿನಾರೆ, ಕ್ಲಬ್, ಜನಸಂದಣಿ ಇರೋ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಉಗ್ರರು ದಾಳಿ ನಡೆಸುವ ಸಾದ್ಯತೆಯಿದೆಯೆಂದು ಇಸ್ರೇಲ್ ಎಚ್ಚರಿಕೆ ನೀಡಿದೆ. ಭಾರತದ ಪ್ರವಾಸದಲ್ಲಿರೋ ಇಸ್ರೇಲ್ ನಾಗರಿಕೆರಿಗೆ ಜಾಗ್ರತೆಯಿಂದ ಇರುವಂತೆ ಎಚ್ಚರಿಕೆ ನೀಡಿದೆ.