ಹೊಸತನದ `ಸುದ್ದಿ ಟಿ.ವಿ.'ಬರ್ತಾ ಇದೆ…

0
628

ನಮ್ಮ ಪ್ರತಿನಿಧಿ ವರದಿ
ಕನ್ನಡ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿಕೊಂಡವರು ಶಶಿಧರ್ ಭಟ್. ರಾಜಕೀಯ ವಿಶ್ಲೇಷಣೆಗಳ ಮೂಲಕ  ಜನಮನಗೆದ್ದವರು. ಮುದ್ರಣ ಮಾಧ್ಯಮದ ನಂತರ ಕಾವೇರಿ, ಸುವರ್ಣ, ಸಮಯ ಹೀಗೆ ವಾಹಿನಿಗಳ ಜವಾಬ್ಧಾರಿಯನ್ನು ಹೊತ್ತು ಕಟ್ಟಿ ಬೆಳೆಸಿ ಅನುಭವ ಹೊಂದಿದವರು. ತನ್ನ ಸ್ವಂತ ಪ್ರೊಡಕ್ಷನ್ ಹೌಸ್ ಮೂಲಕ ಹಲವು ಕಾರ್ಯಕ್ರಮಗಳನ್ನು ವಾಹಿನಿಗಳಲ್ಲಿ ಪ್ರಸಾರ ಮಾಡಿದ ಅನುಭವ ಹೊಂದಿದ್ದಾರೆ. ಮಾಧ್ಯಮದಲ್ಲಿ ಒಂದು ಹಿಡಿತ ಸಾಧಿಸಿದ್ದಾರೆ. ಇಂದಿಗೂ ಫೇಸ್ ವ್ಯಾಲ್ಯೂ ಉಳಿಸಿಕೊಂಡ ಅಪರೂಪದ ಪತ್ರಕರ್ತ.
12038940_1098125736866731_132515608977833816_o
ಇದೀಗ ತನ್ನದೇ ಆದ ಸುದ್ದಿಚಾನೆಲ್ ಆರಂಭಿಸುವ ಸಾಹಸಕ್ಕೆ ಹೊರಟಿದ್ದಾರೆ. ಯಶ್ ಟೆಕ್ ಮಿಡಿಯಾ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ಸುದ್ದಿ ಟಿ.ವಿಯನ್ನು ಹೊರತರುವ ಭಟ್ಟರ ಸಾಹಸಕ್ಕೆ ಅನುಭವೀ ಪತ್ರಕರ್ತರೂ ಸಾಥ್ ನೀಡಿದ್ದಾರೆ. ನ್ಯಾಷನಲ್ ಟಿ.ವಿ. ಚಾನೆಲ್ ಗಳನ್ನೂ ಮೀರಿಸುವಂತಹ ರೀತಿಯಲ್ಲಿ ಸುದ್ದಿ ಟಿ.ವಿಯ ಸ್ಟುಡಿಯೋ ನಿರ್ಮಾಣವಾಗುತ್ತಿದೆ. ಹೊಸ ಹೊಸ ಸಾಧನೆಗಳ ಮೂಲಕ ಸುದ್ದಿಟಿವಿ ಜನಮನ ಗೆಲ್ಲುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿದೆ.
 
ಬೆಂಗಳೂರಿನ ಶಾಂತಿನಗರದಲ್ಲಿ ವಿಶಾಲವಾದ ಹೊಸತನದ ಟಿ.ವಿ. ಸ್ಟುಡಿಯೋ , ಲೈವ್ ವಾಲ್ ಗಳು ಅದ್ಭುತ ಪರಿಕಲ್ಪನೆಗಳಿಂದ ಸುಂದರವಾಗಿ ನಿರ್ಮಾಣವಾಗುತ್ತಿದೆ. `ನಾವು ಸುಳ್ಳು ಹೇಳಲ್ಲ’ ಎಂಬ ಟ್ಯಾಗ್ ಲೈನ್ ಹೊಂದಿರುವ ಸುದ್ದಿ ಟಿವಿ ಫೇಸ್ ಬುಕ್ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಿದೆ.  ಈಗಾಗಲೇ ಮಾಧ್ಯಮರಂಗದಲ್ಲಿ ಗುರುತಿಸಿಕೊಂಡ ಅನುಭವೀ ತಂಡ ಸುದ್ದಿಟಿವಿಯ ಯುವತಂಡಕ್ಕೆ ಸೂಕ್ತ ತರಬೇತಿ ನೀಡುತ್ತಿದೆ. ಭಟ್ಟರ ಪ್ರಕಾರ 15ರಂದು ಲೋಕಾರ್ಪಣೆಯಾಗಲಿದೆ. ಎನಿವೇ ಶಶಿಧರ್ ಭಟ್ ಅವರ ಹೊಸ ಸಾಹಸಕ್ಕೆ ನಮ್ಮ ತಂಡದ ಶುಭಹಾರೈಕೆಗಳು.
suddi_tv_shashidar_bhat_vaarte_news
” ನಿಮಗೆ ಒಂದು ಸಂತೋಷದ ಸುದ್ದಿ. ವಿಶ್ವದ ಪ್ರಮುಖ ರಾಜಧಾನಿಗಳಲ್ಲಿ ನಿಮ್ಮ ಸುದ್ದಿ ಟೀವಿ ತನ್ನ ಪ್ರತಿನಿಧಿಗಳನ್ನು ಹೊಂದಲಿದೆ. ವಿಶ್ವದ ಮಹತ್ವದ ಘಟನೆಗಳನ್ನು ನೇರವಾಗಿ ನಿಮ್ಮ ಮನೆ ಬಾಗಿಲಿಗೆ ತರಬೇಕು ಅನ್ನುವುದು ನಮ್ಮ ಆಸೆ. ಇಲ್ಲಿ ನೋದಿ ನಮ್ಮ ಲಂಡನ್ ಪ್ರತಿನಿಧಿ. ಇಂಗ್ಲಂಡಿನ ಮಹಾರಾಣಿಯ ೯೦ ನೆಯ ಹುಟ್ಟು ಹಬ್ಬದ ಆಚರಣೆಯ ವರದಿ ಮಾಡುತ್ತಿದ್ದಾರೆ.. ಬಹುಶಃ ಕನ್ನಡ ಸುದ್ದಿ ವಾಹಿನಿಯೊಂದು ಲಂಡನ್ನಿನಲ್ಲಿ ಪ್ರತಿನಿಧಿಯನ್ನು ಹೊಂದಿರುವುದು ಇದೇ ಮೊದಲು. ಇದು ನಮಗೆಲ್ಲ ಸಂತೋಷದ ವಿಷಯ. ಇದನ್ನು ನಿಮ್ಮನ್ನು ಬಿಟ್ಟು ಇನ್ಯಾರಿಗೆ ಹೇಳಲಿ ” -ಶಶಿಧರ್ ಭಟ್
 

LEAVE A REPLY

Please enter your comment!
Please enter your name here