ಹೊರೆಕಾಣಿಕೆ ಮೆರವಣಿಗೆ

0
215

ಮೂಡಬಿದಿರೆ ಪ್ರತಿನಿಧಿ ವರದಿ
ಮೂಡು ವೇಣುಪುರ ಕ್ಷೇತ್ರದಲ್ಲಿ ವಿರಾಜಮಾನರಾದ ಶ್ರೀ ಗೋಪಾಲಕೃಷ್ಣ ದೇವರ ಬಿಂಬ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ಹೊರೆಕಾಣಿಕೆ ಮೆರವಣಿಗೆ ಮೂಡಬಿದಿರೆ ಪಟ್ಟಣದಲ್ಲಿ ನಡೆಯಿತು. ಸ್ವರಾಜ್ಯ ಮೈದಾನದ ಶ್ರೀ ಆದಿಶಕ್ತಿ ದೇವಸ್ಥಾನದ ಮುಂಭಾಗದಲ್ಲಿ ಮೂಡಬಿದಿರೆ ಚೌಟರ ಅರಮನೆಯ ಕುಲದೀಪ್ ಚೌಟ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೀಣರ್ೋದ್ಧಾರ ಸಮಿತಿಯ ಗೌರವಾಧ್ಯಕ್ಷ ಕೆ.ಅಮರನಾಥ ಶೆಟ್ಟಿ , ಅಧ್ಯಕ್ಷ ಕೆ.ಶ್ರೀಪತಿ ಭಟ್, ಉದ್ಯಮಿ ನಾರಾಯಣ ಪಿ.ಎಂ, ಅಶ್ವಿನ್, ಸುದರ್ಶನ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಂಚ ವಾದ್ಯ ಮೇಳಗಳು ಆಕರ್ಷಕವಾಗಿದ್ದವು.

LEAVE A REPLY

Please enter your comment!
Please enter your name here