ಹೊರನಾಡ ಕನ್ನಡಿಗರಿಗೆ ಒದಗಿಸಬೇಕಾದ ಸೌಲಭ್ಯಗಳನ್ನು ನೀಡಲು ಒತ್ತಾಯ"

0
363

ನಮ್ಮ ಪ್ರತಿನಿಧಿ ವರದಿ
ಸಮಾನ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕೆಂಬುದು ಕರ್ನಾಟಕದ ಜನ ಸಾಮಾನ್ಯರ ಮತ್ತು ನೈಜ ಶಿಕ್ಷಣವೇತ್ತರ ಬಹುದಿನದ ಬೇಡಿಕೆಯಾಗಿದೆ. 2016ರ ಡಿಸೆಂಬರ್ 2, 3 ಮತ್ತು 4 ರಂದು ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 1) ಕರ್ನಾಟಕ ಸರ್ಕಾರವು ಸಮಾನ ಶಿಕ್ಷಣ ನೀತಿಯನ್ನು ರೂಪಿಸಿ ಜಾರಿಗೆ ತರಬೇಕು. 2) ಕರ್ನಾಟಕದೊಳಗೆ ಇರುವ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಸಿಗುತ್ತಿರುವ ಶೈಕ್ಷಣಿಕ ಮತ್ತು ಉದ್ಯೋಗ ಸಂಬಂಧಿ ಸೌಲಭ್ಯಗಳು ಹೊರನಾಡ ಕನ್ನಡಿಗರಿಗೂ ಸಿಗಬೇಕು ಎಂದು ನಿರ್ಣಯವನ್ನು ಸ್ವೀಕರಿಸಿದೆ.
 
 
ಈ ಸಂಬಂಧವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಹಾಗೂ 82ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ಮಾ.3ರಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಮೇಲ್ಕಂಡ ನಿರ್ಣಯವನ್ನು ಜಾರಿಗೊಳಿಸುವ ಹಾಗೂ ಹೊರನಾಡ ಕನ್ನಡಿಗರಿಗೆ ಸೌಲಭ್ಯಗಳನ್ನು ಒದಗಿಸುವ ಕಾರ್ಯಯೋಜನೆಯನ್ನು ಸೇರಿಸುವಂತೆ ಒತ್ತಾಯಿಸಿ ಮನವಿಯನ್ನು ನೀಡಿದರು. ಮಾನ್ಯ ಸಚಿವರು ತಾತ್ವಿಕವಾಗಿ ಇದಕ್ಕೆ ಒಪ್ಪಿದರು ಹಾಗೂ ಇದನ್ನು ಕಾರ್ಯರೂಪಕ್ಕೆ ತರಲು ಮುಂಬರುವ ಬಜೆಟ್ನಲ್ಲಿ ಅಳವಡಿಸಿಕೊಳ್ಳಲು ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚಚರ್ಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಈಗಾಗಲೇ ಡಾ. ಮನು ಬಳಿಗಾರ್ ಮತ್ತು ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಮಾನ್ಯ ಮುಖ್ಯ ಮಂತ್ರಿಗಳನ್ನೂ ಕೂಡ ದಿನಾಂಕ 01-03-2017ರಂದು ಭೇಟಿ ಮಾಡಿ ಅವರನ್ನೂ ಸಹ ಈ ಬಗ್ಗೆ ವಿನಂತಿಸಿದ್ದರು.

LEAVE A REPLY

Please enter your comment!
Please enter your name here