ಹೊನ್ನಾವರದಲ್ಲಿ ವಿಶ್ವ ರೈತ ದಿನಾಚರಣೆ

0
653

ಹೊನ್ನಾವರ: ವಿಶ್ವ ರೈತ ದಿನಾಚರಣೆ ಅಂಗವಾಗಿ ಮೂಕ ಕೃಷಿಕ ಮಂಜುನಾಥ ರಾಮ ನಾಯ್ಕ ಇವರಿಗೆ ಸನ್ಮಾನಿಸಿ ಗೌರವಿಸುವುದರ ಮೂಲಕ ಮೂಡ್ಕಣಿಯಲ್ಲಿ “ನೇಗಿಲಯೋಗಿಗೆ ನಮನ” ಕಾರ್ಯಕ್ರಮ ವಿಭಿನ್ನವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಪ್ರಭಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವಿನಾಯಕ ನಾಯ್ಕ, ಗ್ರಾಮದ ಕೃಷಿಕರಾದ ಉಮೇಶ್ ನಾಯ್ಕ, ನಾರಾಯಣ ನಾಯ್ಕ, ಶ್ರೀಧರ ನಾಯ್ಕ ಇತರರು ಉಪಸ್ಥಿತರಿದ್ದರು.

ಮಂಜುನಾಥ ನಾಯ್ಕರ ಕುರಿತು..:-
ಮಂಜುನಾಥ ನಾಯ್ಕ ಇವರು ಮೂಲತಃ ಮೂಡ್ಕಣಿಯವರು. ಇವರಿಗೆ ಹುಟ್ಟಿನಿಂದಲೂ ಮಾತು ಬಾರದು. ಪತ್ನಿ ಮಂಗಲಾ ನಾಯ್ಕ ಹಾಗೂ ಮೂವರು ಮಕ್ಕಳಿರುವ ಚಿಕ್ಕ ಕುಟುಂಬ ಇವರದ್ದು. ಮಾತು ಬಾರದೇ ಇದ್ದರೂ ಕಳೆದ ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಕೃಷಿ ಕಾರ್ಯ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ವಿಶ್ವ ರೈತ ದಿನಾಚರಣೆಯ ಅಂಗವಾಗಿ ಸಂಪ್ರಭಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಪುರಸ್ಕರಿಸಿದ್ದು ಹೆಮ್ಮೆಯ ವಿಷಯವಾಗಿದೆ.

ವಿಶೇಷ ವರದಿ:
ಎಂ ಎಸ್ ಶೋಭಿತ್ ಮೂಡ್ಕಣಿ

LEAVE A REPLY

Please enter your comment!
Please enter your name here