ಹೊತ್ತಿ ಉರಿದ ವಿಮಾನ

0
249

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಅಮೆರಿಕಾದಲ್ಲಿ ರನ್ ವೇನಲ್ಲಿ ವಿಮಾನ ಹೊತ್ತಿ ಉರಿದಿದೆ. ಚಿಕಾಗೋ ಓಹ್ರೆ ಏರ್ ಪೋರ್ಟ್ ನಲ್ಲಿ ಅಮೆರಿಕ ಏರ್ ಲಯನ್ಸ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ವಿಮಾನ ಬೆಂಕಿಗಾಹುತಿಯಾಗಿದೆ.
 
 
 
ಇದರಿಂದ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಠಿಯಾಗಿತ್ತು. ಫ್ಲೈಟ್ ಟೇಕಾಫ್ ವೇಳೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಇಂಜಿನ್ ನಂ.2ರಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಇದರಿಂದ ಬೋಯಿಂಗ್ 767 ವಿಮಾನ ಧಗಧಗ ಹೊತ್ತಿ ಉರಿದಿದೆ. ವಿಮಾನದಲ್ಲಿ 161 ಪ್ರಯಾಣಿಕರು, 9 ಸಿಬ್ಬಂದಿಗಳಿದ್ದರು.
 
 
ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ 20 ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ.

LEAVE A REPLY

Please enter your comment!
Please enter your name here