ಹೈ ಎಲರ್ಟ್‌ ಘೋಷಣೆ…ರಸ್ತೆಗಳೆಲ್ಲಾ ಬಂದ್‌ ಬಂದ್…‌

0
347

ಕೇರಳದಲ್ಲಿ ಕೊರೊನೋ ಎಫೆಕ್ಟ್‌ ಭಾರೀ ಜೋರು

ಕೇರಳ ಪ್ರತಿನಿಧಿ ವರದಿ

ಕೇರಳದಲ್ಲಿ ಕೊರೊನೋ ವೈರಸ್‌ ತನ್ನ ತೀವ್ರತೆಯನ್ನು ಹೆಚ್ಚಿಸಿರುವ ಹಿನ್ನಲೆಯಲ್ಲಿ ಹೈ ಎಲರ್ಟ್‌ ಘೋಷಿಸಲಾಗಿದೆ. ಕೇರಳದ ಕಾಸರಗೋಡಿಗೆ ಕರ್ನಾಟಕ ಹಾಗೂ ಇತರ ಭಾಗಗಳಿಂದ ಸಂಪರ್ಕಿಸುವ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಈ ರೀತಿಯಲ್ಲಿ ಯಾರೂ ಈ ಭಾಗದಿಂದ ಹೊರ ಹೋಗದಂತೆ ಹಾಗೂ ಹೊರಗಿನಿಂದ ಕಾಸರಗೋಡು ಭಾಗಕ್ಕೆ ಬರದಂತೆ ಆದೇಶಿಸಲಾಗಿದೆ.
ಒಟ್ಟಿನಲ್ಲಿ ಜನತೆಯಲ್ಲಿ ಭೀತಿಯ ವಾತಾವರಣ ಸೃಷ್ಠಿಯಾಗಿದೆ.
ಕೋವಿಡ್ 19 ಹೈ ಅಲೆರ್ಟ್ ಕೇರಳ

ಕೇರಳ ಕರ್ನಾಟಕ ಸಂಪರ್ಕ ಕಲ್ಪಿಸುವ ಗಡಿನಾಡಿನ ಎಲ್ಲಾ ರಸ್ತೆಗಳನ್ನೂ ಕೇರಳ ಸರಕಾರ ಬಂದ್ ಮಾಡಿ ಆದೇಶ ಹೊರಡಿಸಿದೆ. ಮಂಜೇಶ್ವರ ತೂಮಿನಾಡು ರಸ್ತೆ, ಕೆದಂಬಾಡಿ ಪದವು ರಸ್ತೆ , ಸುಂಕದಕಟ್ಟೆ ಮುಡಿಪು ರಸ್ತೆ , ಕುರುಡ ಪದವು ಲಾಲ್ಬಾಗ್ ರಸ್ತೆ , ಮುಳಿಗದ್ದೆ ಬಾಯಾರು ರಸ್ತೆ , ಬೆರಿಪದವು ಪೆರುವಾಯಿ ರಸ್ತೆ , ಸ್ವರ್ಗ ಆರ್ಲಪದವು ರಸ್ತೆ , ಆರ್ಲಪದವು ಸ್ವರ್ಗ ರಸ್ತೆ , ಆದೂರು ಕೊಟ್ಟಿಯಾಡಿ ರಸ್ತೆ , ಪಳ್ಳತ್ತೂರು ಈಶ್ವರ ಮಂಗಿಳ ರಸ್ತೆ , ಗಾಳಿಮುಗ ಈಶ್ವರ ಮಂಗಳ ದೇಲಂಪಾಡಿ ರಸ್ತೆ , ನಾಟೆಕಲ್ ಸುಳ್ಯಪದವು ರಸ್ತೆ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಆದೇಶಿಸಿದೆ. ತನ್ಮೂಲಕ ಕೊರೊನಾ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಈ ಆದೇಶ ಮಾಡಲಾಗಿದೆ.

LEAVE A REPLY

Please enter your comment!
Please enter your name here